ತಪ್ಪಿದ ಅನಾಹುತ: ವಿಮಾನ ಅಪಘಾತದಿಂದ ಧ್ರುವ ಸರ್ಜಾ ಮತ್ತು ‘ಮಾರ್ಟಿನ್’ ಚಿತ್ರತಂಡ ಪಾರು ನಟ ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್’ ಸಿನಿಮಾ ( ) ತಂಡದವರು ವಿಮಾನ ದುರಂತದಿಂದ ( ) ಪಾರಾಗಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಬೆಂಗಳೂರು: ಸಂಭವಿಸಬಹುದಾಗಿದ್ದ ಭೀಕರ ವಿಮಾನ ಅಪಘಾತ ದುರಂತದಿಂದ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಮತ್ತು ಮಾರ್ಟಿನ್ ಚಿತ್ರತಂಡ ಪಾರಾಗಿದೆ.ನಟ ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್’ ಸಿನಿಮಾ ( ) ತಂಡದವರು ವಿಮಾನ ದುರಂತದಿಂದ ( ) ಪಾರಾಗಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.ಆಗಿದ್ದೇನು?: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರ ತಂಡ ಅಂತಿಮ ಹಂತದ ಚಿತ್ರೀಕರಣದ ಯೋಜನೆಯಲ್ಲಿತ್ತು. ಹೀಗಾಗಿ ಚಿತ್ರ ತಂಡ ನಿನ್ನೆ ಸೋಮವಾರ ಸಂಜೆ ಹಾಡೊಂದರ ಚಿತ್ರೀಕರಣಕ್ಕಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಇಂಡಿಗೋ ವಿಮಾನದಲ್ಲಿ ಪಯಣಿಸುತ್ತಿತ್ತು. (@dhruva_sarjaa)ಆದರೆ ಇದ್ದಕ್ಕಿದ್ದಂತೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಹವಾಮಾನ ವೈಪರೀತ್ಯದಿಂದಾಗಿ ರಾಡಾರ್ ಕಂಟ್ರೋಲ್ ತಪ್ಪಿದ್ದ ವಿಮಾನ ಕಾರ್ಗಿಲ್ ಪ್ರದೇಶಕ್ಕೂ ಹೋಗಿ ಹಠಾತ್ತನೆ ಸಾವಿರಾರು ಅಡಿ ಕೆಳಗಿಳಿದು ಪೈಲೆಟ್ ಕಂಟ್ರೋಲ್ ತಪ್ಪಿದೆ ಎಂದು ತಿಳಿದು ಬಂದಿದೆ.ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇಂಡಿಗೋ ವಿಮಾನದಲ್ಲಿಯೇ ‘ಮಾರ್ಟಿನ್’ ಚಿತ್ರತಂಡದವರು ವಿಡಿಯೋ ಮಾಡಿದ್ದಾರೆ. ‘ಇವತ್ತಿನ ರೀತಿ ಇಷ್ಟು ಕೆಟ್ಟ ಅನುಭವ ಇಡೀ ಜೀವನದಲ್ಲೇ ಆಗಿರಲಿಲ್ಲ. ಈಗ ನಾವು ಸೇಫ್ ಆಗಿದ್ದೇವೆ. ಜೈ ಆಂಜನೇಯ. ಪೈಲಟ್ಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ..# & # # . 6E6125. . @AP_Arjun_film @ # ../s5hKsa4yJ1