ಸಿಂಹ- ಪ್ರಿಯಾ ವಿವಾಹಕ್ಕೆ ಮೂಹೂರ್ತ ಫಿಕ್ಸ್: ಮೈಸೂರಿನಲ್ಲಿ ಸಪ್ತಪದಿ ತುಳಿಯಲಿದೆ ಚಂದನವನದ ಮುದ್ದು ಜೋಡಿ! ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನಲ್ಲಿ ತಮ್ಮ ವಿವಾಹ ಸಮಾರಂಭ ನಡೆಸಲು ಇಬ್ಬರು ನಿರ್ಧರಿಸಿದ್ದಾರೆ. ಮೈಸೂರು: ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನಲ್ಲಿ ತಮ್ಮ ವಿವಾಹ ಸಮಾರಂಭ ನಡೆಸಲು ಇಬ್ಬರು ನಿರ್ಧರಿಸಿದ್ದಾರೆ.ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ಚಂದನವನದ ಮುದ್ದು ಜೋಡಿಯ ವಿವಾಹ ನಡೆಯಲಿದೆ. ಹರಿಪ್ರಿಯಾ-ವಸಿಷ್ಠ ಅವರು ಆಶ್ರಮಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಕೂಡ ಜೊತೆಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ತಿಳಿಸಿದ್ದಾರೆ.ಖ್ಯಾತ ಚಲನಚಿತ್ರ ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ನಡೆಯಲಿದೆ" ಎಂದಿರುವ ಅವರು ಆಶ್ರಮದಲ್ಲಿ ಸ್ವಾಮೀಜಿಗಳೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.: 'ಸಿಂಹಪ್ರಿಯಾ' ಎಂಗೇಜ್ ಮೆಂಟ್ ನ ಮತ್ತಷ್ಟು ಬ್ಯೂಟಿಫುಲ್ ಫೋಟೋಗಳುಈ ತಾರಾ ಜೋಡಿಗೆ ಕಳೆದ ಡಿಸೆಂಬರ್ 3 ರಂದು ಹರಿಪ್ರಿಯಾ ನಿವಾಸದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದ ಬಹುಭಾಷಾ ನಟಿ ಹರಿಪ್ರಿಯಾ ಮುದ್ದಾದ ನಾಯಿ ಮರಿ ಕ್ರಿಸ್ಟಲ್ ಇಂದಾಗಿ ತಾವು ಪ್ರೀತಿಯಲ್ಲಿ ಬಿದ್ದ ಬಗ್ಗೆ ತಿಳಿಸಿದ್ದರು.ಖ್ಯಾತ ಚಲನಚಿತ್ರ ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ನಡೆಯಲಿದೆ. ../