'ಕೆ 46' ಚಿತ್ರಕ್ಕೆ ತಯಾರಿ: ಭರ್ಜರಿ ವರ್ಕೌಟ್ ಫೋಟೋ ಶೇರ್ ಮಾಡಿದ ಕಿಚ್ಚ ಸುದೀಪ್! ಕಿಚ್ಚ ಸುದೀಪ್ ಅವರ ಹೊಸ ಪ್ರಾಜೆಕ್ಟ್‌ಗೆ ತಾತ್ಕಾಲಿಕವಾಗಿ 'ಕೆ 46' ಎಂದು ಹೆಸರಿಸಲಾಗಿದ್ದು, ಚಿತ್ರಕ್ಕಾಗಿ ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್ ಅವರ ಹೊಸ ಪ್ರಾಜೆಕ್ಟ್‌ಗೆ ತಾತ್ಕಾಲಿಕವಾಗಿ 'ಕೆ 46' ಎಂದು ಹೆಸರಿಸಲಾಗಿದ್ದು, ಚಿತ್ರಕ್ಕಾಗಿ ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆತಾಲೀಮು ನನ್ನ ಹೊಸ ಹ್ಯಾಪಿ ಸ್ಪೇಸ್ ಆಗಿದೆ. ಪ್ರತಿದಿನದ ದಿನಚರಿ ನನ್ನನ್ನು ಶಾಂತವಾಗಿರಿಸಿದೆ ಮತ್ತು ಫೋಕಸ್ ಆಗಿರುವಂತೆ ಮಾಡಿದೆ. 'K46' ಸಿನಿಮಾದ ಕ್ಲೈಮ್ಯಾಕ್ಸ್ ಫೈಟ್ ಸೀಕ್ವೆನ್ಸ್‌ ಇನ್ನೊಂದು ತಿಂಗಳಲ್ಲಿ ಅಥವಾ ಅದಕ್ಕಿಂತ ಮೊದಲು ನಡೆಯಲಿದೆ. ನನ್ನ ವರ್ಕೌಟ್ ಸ್ಟೇಷನ್‌ನಲ್ಲಿ ಸಾಧಿಸಲು ಸಾಕಷ್ಟಿದೆ' ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಳೆ ಮುನಿಸು ಮರೆತು ಮತ್ತೆ ಒಂದಾದರೇ ಕಿಚ್ಚ ಸುದೀಪ್-ದರ್ಶನ್?: ಸಂಸದೆ ಸುಮಲತಾ ಹುಟ್ಟುಹಬ್ಬ ಪಾರ್ಟಿಯಲ್ಲಿ ಇಬ್ಬರು ಮುಖಾಮುಖಿ (@)ಸಹಜವಾಗಿಯೇ ಅಭಿಮಾನಿಗಳು ಈ ಪೋಟೋಗಳಿಗೆ ಫಿದಾ ಆಗಿದ್ದು, ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಸುದೀಪ್ ಪಾತ್ರಗಳಿಗೆ ತಯಾರಿಯಲ್ಲಿ ಅಲ್ಲದಿದ್ದರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಹೆಚ್ಚು ಸಮಯ ಕಳೆಯುತ್ತಾರೆ.