ಬಿಗ್ ಬಾಸ್ ಮನೆ ಸೇರಲಿದ್ದಾಳೆ ಬಿ.ಜಯಶ್ರೀ ಪುತ್ರಿ ಸುಷ್ಮಾ ರಾಜ್ಯಸಭಾ ಸದಸ್ಯೆ ಹಾಗೂ ರಂಗಭೂಮಿಯ ಹಿರಿಯ ಕಲಾವಿದೆ ಬಿ.ಜಯಶ್ರೀ ಅವರ ಪುತ್ರಿ ಸುಷ್ಮಾ ವೈಲ್ಡ್ ಕಾರ್ಡ್‌ ಮೂಲಕ "ಬಿಗ್‌ಬಾಸ್‌' ಮನೆಗೆ ಎಂಟ್ರಿ ... ಬೆಂಗಳೂರು: ರಾಜ್ಯಸಭಾ ಸದಸ್ಯೆ ಹಾಗೂ ರಂಗಭೂಮಿಯ ಹಿರಿಯ ಕಲಾವಿದೆ ಬಿ.ಜಯಶ್ರೀ ಅವರ ಪುತ್ರಿ ಸುಷ್ಮಾ ವೈಲ್ಡ್ ಕಾರ್ಡ್‌ ಮೂಲಕ "ಬಿಗ್‌ಬಾಸ್‌' ಮನೆಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡುತ್ತಿರುವವರ ಪೈಕಿ ಸುಷ್ಮಾ ಮೊದಲಿಗರು. ಇತ್ತೀಚೆಗಷ್ಟೇ ನಟ ಅ.ರಾ.ಮಿತ್ರ ಹಾಗೂ ಕಿರುತೆರೆ ನಟಿ ಗೌತಮಿ ಗೌಡ ಅವರು "ಬಿಗ್‌ಬಾಸ್‌' ಮನೆಗೆ ಕಾಲಿಟ್ಟ ಬೆನ್ನಲ್ಲೇ ಈಗ ಮತ್ತೂಬ್ಬ ನಟಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸುವ ಸೂಚನೆ ಸಿಕ್ಕಿದೆ. ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವ ಸುಷ್ಮಾ ಅವರಿಗೆ "ಉಲ್ಟಾಪಲ್ಟಾ' ಚಿತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು. ರಮೇಶ್‌ ಅರವಿಂದ್‌ ಜತೆ ಜೋಡಿಯಾಗಿ ನಟಿಸಿದ ಸುಷ್ಮಾ,ಆ ಚಿತ್ರದ ಮೂಲಕ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ಎನಿಸಿಕೊಂಡರು. ನಂತರದ ದಿನಗಳಲ್ಲಿ ಅವರು ಹಲವು ಚಿತ್ರಗಳಲ್ಲಿ ಅನೇಕ ವಿಭಾಗದಲ್ಲೂ ಕೆಲಸ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ, "ಬಿಗ್‌ಬಾಸ್‌' ಶೋನಲ್ಲಿ ಸುಷ್ಮಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.