ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಜೈಲರ್: ರಜನಿಗೆ ಸನ್ ಪಿಕ್ಚರ್ಸ್ ಭಾರಿ ಗಿಫ್ಟ್; 100 ಕೋಟಿ ರೂ. ಚೆಕ್ ವಿತರಣೆ? ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ದೇಶಾದ್ಯಂತ ಯಶಸ್ವಿ ಪ್ರದರ್ಶನ ಮುಂದುವರಿಸಿದ್ದು, 600 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ. ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದು, ದೇಶಾದ್ಯಂತ ಯಶಸ್ವಿ ಪ್ರದರ್ಶನ ಮುಂದುವರಿಸಿದ್ದು, ರೂ. 600 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.ಜೈಲರ್ ಯಶಸ್ವಿ ಪ್ರದರ್ಶನದಿಂದ ಖುಷಿಯಾಗಿರುವ ಚಿತ್ರ ನಿರ್ಮಾಪಕರು ಹಾಗೂ ಸನ್ ಪಿಕ್ಚರ್ಸ್ ಮಾಲೀಕರು ಆದ ಕಲಾನಿಧಿ ಮಾರನ್ ಅವರು ರಜನಿಕಾಂತ್ ಅವರಿಗೆ 100 ಕೋಟಿ ರೂಪಾಯಿ ಉಡುಗೊರೆ ರೂಪದ ಚೆಕ್ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತ ಫೋಟೋವೊಂದನ್ನು ಸನ್ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.. @ , # ../Y1wp2ugbdiಅಲ್ಲದೇ, ಸನ್ ಪಿಕ್ಚರ್ಸ್ ಸಂಸ್ಥೆಯಿಂದ ರಜನಿಕಾಂತ್ ಅವರಿಗೆ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರನ್ನು ಸಹ ಉಡುಗೊರೆಯಾಗಿ ನೀಡಲಾಗಿದೆ. ಇದರ ವಿಡಿಯೋವನ್ನು ನಿರ್ಮಾಣ ಸಂಸ್ಥೆ ಸಾಮಾಜಿಕ ಜಲಾತಣಗಳಲ್ಲಿ ಹಂಚಿಕೊಂಡಿದೆ. # ! @ . X7 . ../tI5BvqlRorನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿಕಾಂತ್, ಶಿವರಾಜ್ ಕುಮಾರ್ ಹಾಗೂ ಮೋಹನ್ ಲಾಲ್ ಅಭಿನಯದ ಜೈಲರ್ ಚಿತ್ರ ಆಗಸ್ಟ್ 10 ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಿತ್ತು.