ಚೆನ್ನೈ ಪ್ರವಾಹ: ತಮಿಳು ನಟ ವಿಷ್ಣು ವಿಶಾಲ್ ಮನೆಯಲ್ಲಿ ಸಿಲುಕಿದ್ದ ಆಮಿರ್ ಖಾನ್ ರಕ್ಷಣೆ ಮಿಚಾಂಗ್ ಚಂಡಮಾರುತದಿಂದ ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯಿಂದ ತಮಿಳು ನಟ ವಿಷ್ಣು ವಿಶಾಲ್ ಅವರ ಮನೆಯಿರುವ ಚೆನ್ನೈನ ಕರಪಾಕ್ಕಂ ಪ್ರದೇಶ ಸಹ ಜಲಾವೃತ್ತಗೊಂಡಿದೆ. ಹೀಗಾಗಿ ವಿಷ್ಣು ವಿಶಾಲ್‌ ಅವರ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರನ್ನು ರಕ್ಷಿಸಲಾಗಿದೆ.ಇದನ್ನು ಓದಿ: ಮಿಚಾಂಗ್ ಚಂಡಮಾರುತ: ನಿಂತ ಮಳೆ, ತಗ್ಗಿದ ನೀರು, ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಪುನಾರಂಭನಟ ವಿಷ್ಣು ವಿಶಾಲ್, ಆಮಿರ್‌ ಖಾನ್‌ ಹಾಗೂ ಇತರೆ ಪ್ರವಾಹ ಸಂತ್ರಸ್ತರನ್ನು ರಕ್ಷಣಾ ಸಿಬ್ಬಂದಿ ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವ ಚಿತ್ರಗಳು ವೈರಲ್‌ ಆಗಿವೆ.ನಟ ವಿಷ್ಣು ವಿಶಾಲ್ ಅವರು ʼಎಕ್ಸ್‌ʼನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, “ಪ್ರವಾಹದಲ್ಲಿ ಸಿಕ್ಕಿಬಿದ್ದ ನಮ್ಮಂತಹ ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದ ಹೇಳಿದ್ದಾರೆ. .. 3 ://./QdoW7zaBuI ../qyzX73kHmc