2023ನೇ ಸಾಲಿನ ಆಸ್ಕರ್ ಪ್ರಶಸ್ತಿ: ಗುಜರಾತಿ ಸಿನಿಮಾ 'ಚೆಲೊ ಶೋ' ಭಾರತದಿಂದ ನಾಮನಿರ್ದೇಶನ ಗುಜರಾತಿ ಭಾಷೆಯ ಚಿತ್ರ 'ಚೆಲೋ ಶೋ' 2023ರ ಸಾಲಿನ 95ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿರುವ ಚಿತ್ರವಾಗಿದೆ. ನವದೆಹಲಿ: ಗುಜರಾತಿ ಭಾಷೆಯ ಚಿತ್ರ 'ಚೆಲೋ ಶೋ' 2023ರ ಸಾಲಿನ 95ನೇ ಆಸ್ಕರ್ ಪ್ರಶಸ್ತಿಗೆ( 2023) ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿರುವ ಚಿತ್ರವಾಗಿದೆ.ಗುಜರಾತ್ ನ ಸೌರಾಷ್ಟ್ರದ ಹಳ್ಳಿಯೊಂದರಲ್ಲಿ ಚಿಕ್ಕ ಹುಡುಗನ ಸಿನಿಮಾದೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಕಥೆ ಹೇಳುವ ಸಿನಿಮಾವು 95 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಮಂಗಳವಾರ ಪ್ರಕಟಿಸಿದೆ.ಇಂಗ್ಲಿಷ್‌ನಲ್ಲಿ "ಲಾಸ್ಟ್ ಫಿಲ್ಮ್ ಶೋ" ಎಂಬ ಶೀರ್ಷಿಕೆಯ ಪನ್ ನಳಿನ್-ನಿರ್ದೇಶನದ ಚಿತ್ರವು ಬರುವ ಅಕ್ಟೋಬರ್ 14 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2023 ರ ಆಸ್ಕರ್ ಪ್ರಶಸ್ತಿಗಾಗಿ ಚೆಲೋ ಶೋ ಸಿನೆಮಾ ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಎಫ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಸುಪ್ರಣ್ ಸೇನ್ ಪಿಟಿಐಗೆ ತಿಳಿಸಿದ್ದಾರೆ.ಎಸ್‌ಎಸ್ ರಾಜಮೌಳಿ ಅವರ "ಆರ್‌ಆರ್‌ಆರ್", ರಣಬೀರ್ ಕಪೂರ್ ನೇತೃತ್ವದ "ಬ್ರಹ್ಮಾಸ್ತ್ರ: ಭಾಗ 1 ಶಿವ", ವಿವೇಕ್ ಅಗ್ನಿಹೋತ್ರಿ ಅವರ "ದಿ ಕಾಶ್ಮೀರ್ ಫೈಲ್ಸ್" ಮತ್ತು ಆರ್ ಮಾಧವನ್ ಅವರ ಚೊಚ್ಚಲ ನಿರ್ದೇಶನದ "ರಾಕೆಟ್‌ರಿ" ಯಂತಹ ಚಿತ್ರಗಳಿಗಿಂತ "ಚೆಲೋ ಶೋ" ಅನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಎಫ್‌ಎಫ್‌ಐ ಅಧ್ಯಕ್ಷ ಟಿಪಿ ಅಗರ್ವಾಲ್ ತಿಳಿಸಿದರು. ಇದನ್ನೂ ಓದಿ: ಕಪಾಳ ಮೋಕ್ಷ ಪ್ರಕರಣ: ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಂತೆ ವಿಲ್ ಸ್ಮಿತ್‌ಗೆ 10 ವರ್ಷಗಳ ನಿಷೇಧ17 ಸದಸ್ಯರ ತೀರ್ಪುಗಾರರು 'ಚೆಲೋ ಶೋ' ನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಹಿಂದಿಯಲ್ಲಿ ಆರು ಸಿನೆಮಾಗಳು ಸೇರಿದಂತೆ ವಿವಿಧ ಭಾಷೆಯ ಒಟ್ಟು 13 ಚಲನಚಿತ್ರಗಳು -- 'ಬ್ರಹ್ಮಾಸ್ತ್ರ', 'ದಿ ಕಾಶ್ಮೀರ್ ಫೈಲ್ಸ್', 'ಅನೇಕ್', 'ಜುಂಡ್", "ಬಧಾಯಿ ದೋ" ' ಮತ್ತು 'ರಾಕೆಟ್ರಿ' -- ಮತ್ತು ತಮಿಳು ('ಇರವಿನ್ ನಿಜಲ್'), ತೆಲುಗು ('ಆರ್ಆರ್ಆರ್'), ಬೆಂಗಾಲಿ ('ಅಪರಾಜಿತೋ') ಮತ್ತು ಗುಜರಾತಿ ('ಛೆಲೋ ಶೋ') ಮತ್ತು ಇನ್ನೂ ಕೆಲವು ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಳ್ಳಲು ಪೈಪೋಟಿ ನಡೆಸಿದ್ದವು.ಆಸ್ಕರ್‌ನಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುವ ಚಲನಚಿತ್ರವನ್ನು ಸಿದ್ಧಾರ್ಥ್ ರಾಯ್ ಕಪೂರ್ ಅವರ ಬ್ಯಾನರ್ ರಾಯ್ ಕಪೂರ್ ಫಿಲ್ಮ್ಸ್, ಜುಗಾದ್ ಮೋಷನ್ ಪಿಕ್ಚರ್ಸ್, ಮಾನ್ಸೂನ್ ಫಿಲ್ಮ್ಸ್, ಚೆಲೋ ಶೋ ಎಲ್‌ಎಲ್‌ಪಿ ಮತ್ತು ಮಾರ್ಕ್ ಡ್ಯುಯೆಲ್ ನಿರ್ಮಿಸಿದ್ದಾರೆ. ಗುಜರಾತಿನ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯದಲ್ಲಿ ಚಲನಚಿತ್ರಗಳ ಪ್ರೀತಿಯಲ್ಲಿ ಸಿಲುಕಿದ ನಳಿನ್ ಅವರ ಸ್ವಂತ ನೆನಪುಗಳಿಂದ ಕಥೆಯು ಸ್ಫೂರ್ತಿಯಾಗಿದೆ.ಸೌರಾಷ್ಟ್ರದ ದೂರದ ಗ್ರಾಮಾಂತರ ಹಳ್ಳಿಯ ಒಂಬತ್ತು ವರ್ಷದ ಹುಡುಗನ ಕಥೆಯನ್ನು ಚಿತ್ರ ಹೊಂದಿದೆ, ಬಾಲಕನ ಸಿನಿಮಾ ಹುಚ್ಚು ಬೇಸಿಗೆಯನ್ನು ಸಿನಿಮಾ ನೋಡಿ ಕಳೆಯುವ ಬಗ್ಗೆ ಕಥೆ ಸಾಗುತ್ತದೆ.