ಕೆ.ಶಿವರುದ್ರಯ್ಯ ನಿರ್ದೇಶನದ ವಿಭಿನ್ನ ಕಥೆಯ 'ಸಿಗ್ನಲ್ ಮ್ಯಾನ್ 1971' ಬಿಡುಗಡೆಗೆ ಸಿದ್ಧ! ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಕೆ ಶಿವರುದ್ರಯ್ಯ ಅವರ ಮುಂದಿನ ಸಿಗ್ನಲ್ ಮ್ಯಾನ್ -1971 ಸಿನಿಮಾ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಕೆ ಶಿವರುದ್ರಯ್ಯ ಅವರ ಮುಂದಿನ ಸಿಗ್ನಲ್ ಮ್ಯಾನ್ -1971 ಸಿನಿಮಾ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.ಚಾರ್ಲ್ಸ್ ಡಿಕನ್ಸ್ ಬರೆದ ಸಿಗ್ನಲ್-ಮ್ಯಾನ್ 1866 ರ ಕಥೆಯಾಗಿದ್ದು, ಈ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರೆ.1866ರಲ್ಲಿ ಲೇಖಕ ಚಾರ್ಲ್ಸ್‌ ಡಿಕನ್ಸ್‌ ಬರೆದಿರುವ ಕತೆಯೊಂದು ಈಗ ಭಾರತ ನೆಲಕ್ಕೆ ಹೇಗೆ ಒಗ್ಗುತ್ತದೆ ಎನ್ನುವ ಸವಾಲಿನೊಂದಿಗೆ ನಿರ್ದೇಶಕ ಕೆ ಶಿವರುದ್ರಯ್ಯ ಅವರು ಪ್ರಕಾಶ್‌ ಬೆಳವಾಡಿ ಅವರನ್ನು ಭೇಟಿ ಮಾಡುತ್ತಾರೆ. ಇವರ ಭೇಟಿಯಲ್ಲಿ ಇಂಗ್ಲಿಷ್‌ ಕತೆಯನ್ನು ಕನ್ನಡ ನೆಲಕ್ಕೆ ಒಗ್ಗಿಸುವ ಕೆಲಸಕ್ಕೆ ಪ್ರಕಾಶ್‌ ಬೆಳವಾಡಿ ಒಪ್ಪುತ್ತಾರೆ. ಈ ಬಗ್ಗೆ ನಿರ್ದೇಶಕ ಕೆ ಶಿವರುದ್ರಯ್ಯ ಅವರು ಹೇಳುವುದು ಹೀಗೆ- ‘ಈ ಕತೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಪ್ರಕಾಶ್‌ ಬೆಳವಾಡಿ ಅವರು ಹೆಣೆದು ಕೊಟ್ಟರು.ಈ ಬಗ್ಗೆ ನಿರ್ದೇಶಕ ಕೆ ಶಿವರುದ್ರಯ್ಯ ಅವರು ಹೇಳುವುದು ಹೀಗೆ- ‘ಈ ಕತೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಪ್ರಕಾಶ್‌ ಬೆಳವಾಡಿ ಅವರು ಹೆಣೆದು ಕೊಟ್ಟರು. 1971ರ ಕಾಲಘಟ್ಟದಲ್ಲಿ ನಡೆಯುವ ಕತೆ. ಅಂದರೆ ಆಗಷ್ಟೇ ಭಾರತ ಮತ್ತು ಪಾಕಿಸ್ತಾನ ಯುದ್ಧದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂಥ ಸಮಯದಲ್ಲಿ ನಡೆಯುವ ಕತೆಯೇ ‘ಸಿಗ್ನಲ್‌ಮ್ಯಾನ್‌- 1971’. ಅದು ಪಶ್ಚಿಮ ಘಟ್ಟದ ರೈಲ್ವೆ ನಿಲ್ದಾಣ. ಆದರೆ ಅಲ್ಲಿ ರೈಲುಗಳು ನಿಲ್ಲುವುದಿಲ್ಲ. ಆ ನಿಲ್ದಾಣದಲ್ಲಿ ಬಾಲು ಎಂಬ ಸಿಗ್ನಲ್‌ಮ್ಯಾನ್‌ ಇರುತ್ತಾನೆ. ಅಂತಹ ಸುಂದರ ಪರಿಸರದಲ್ಲಿರುವ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಫೋಟೋಗ್ರಾಫರ್‌ ರಾಜಶೇಖರ್‌ ಬರುತ್ತಾರೆ. ಬಾಲುವಿನ ಒಂಟಿತನ, ತಳಮಳ, ಹಿಂದಿನ ನೆನಪುಗಳು, ಯುದ್ಧದ ಭೀತಿ, ಸೈನಿಕರನ್ನು ಹೊತ್ತೊಯ್ಯುವ ರೈಲುಗಳು. ಇವೆಲ್ಲವೂ ಐದು ದಿನಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಅದ್ದೂರಿಯಾಗಿ ಬಂದಿದೆ.ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಮೇಚೇರಿ ಲೂಯಿ ಔಸಿಪಚ್ಚನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ 120ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಹೆಗ್ಗಳಿಕೆ ಇವರದ್ದು. ರಾಮಕೃಷ್ಣ ಮೇಕಪ್‌ ಮಾಡಿದ್ದಾರೆ. ಹೀಗೆ ನೈಪುಣ್ಯತೆಯಿಂದ ಕೂಡಿದ ಪರಿಣಿತ ತಂತ್ರಜ್ಞರ ದೊಡ್ಡ ತಂಡವೇ ಈ ಚಿತ್ರಕ್ಕೆ ಕೆಲಸ ಮಾಡಿದೆ.ಡಿಂಪಿ ಫಾದ್ಯಾ, ಮಾಲತೇಶ್‌ ಹೆಚ್‌ ವಿ, ಗೌರಿ ಪ್ರಭು, ಗಣೇಶ್‌ ಪ್ರಭು ಬಿ ವಿ, ಶಿವರುದ್ರಯ್ಯ ಕೆ, ಚಿಕ್ಕರಂಗಸ್ವಾಮಿ ಮುಂತಾದವರು ಚಿತ್ರದ ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.