ಶಿವರಾಜಕುಮಾರ್ ಅಭಿನಯದ ಬಹುನಿರೀಕ್ಷಿತ 'ಘೋಸ್ಟ್' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ; ಅ. 19ರಂದು ತೆರೆಗೆ! ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಘೋಸ್ಟ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದ್ದು, ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಈ ಸಿನಿಮಾ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಘೋಸ್ಟ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದ್ದು, ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಈ ಸಿನಿಮಾ ಅಕ್ಟೋಬರ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶ್ರೀನಿ ನಿರ್ದೇಶನದ ಮತ್ತು ಸಂದೇಶ್ ಪ್ರೊಡಕ್ಷನ್ ನಿರ್ಮಿಸಿರುವ ಘೋಸ್ಟ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.ರಜನಿಕಾಂತ್ ಅಭಿನಯದ ಜೈಲರ್‌ನಲ್ಲಿ ನಟ ಶಿವರಾಜಕುಮಾರ್ ಅವರ ಅತಿಥಿ ಪಾತ್ರವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು ಮತ್ತು ಹೊಸ ಅಭಿಮಾನಿ ಬಳಗದ ಉದಯಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಚಿತ್ರತಂಡ ಘೋಸ್ಟ್ ಸಿನಿಮಾವನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಆರಂಭದಲ್ಲಿ, ಘೋಸ್ಟ್ ಕನ್ನಡದಲ್ಲಿ ಮಾತ್ರ ಪ್ರೀಮಿಯರ್ ಆಗಲಿದೆ ಮತ್ತು ಸಂದೇಶ್ ಪ್ರೊಡಕ್ಷನ್ ಮೂಲಕ ವಿತರಿಸಲಾಗುವುದು ಎನ್ನಲಾಗಿತ್ತು. ಹಿಂದಿ ವಿತರಣಾ ಹಕ್ಕುಗಳನ್ನು ಪಡೆದಿರುವ ಪೆನ್ ಸ್ಟುಡಿಯೋಸ್, ಉತ್ತರ ಭಾರತದಲ್ಲಿ ಸುಮಾರು 600 ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದೆ. ತಮಿಳು ಮತ್ತು ಮಲಯಾಳಂನಲ್ಲಿ ವಿತರಣೆಯ ಒಪ್ಪಂದ ಇನ್ನೂ ಅಂತಿಮವಾಗದಿದ್ದರೂ, ದಿಲ್ ರಾಜು ಒಂದು ವಾರದ ನಂತರ ತೆಲುಗು ಆವೃತ್ತಿಯನ್ನು ವಿತರಿಸಲಿದ್ದಾರೆ.ಇದನ್ನೂ ಓದಿ: ಶಿವರಾಜ್‌ಕುಮಾರ್ ಅಭಿನಯದ ಘೋಸ್ಟ್ ಚಿತ್ರದ ಟ್ರೇಲರ್ ಬಿಡುಗಡೆ; ಗಮನ ಸೆಳೆದ ಡಿಜಿಟಲ್ ಡಿ-ಏಜಿಂಗ್!ಶಿವರಾಜಕುಮಾರ್ ಅವರಲ್ಲದೆ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದ್ದು, ಮಹೇಂದ್ರ ಸಿಂಹ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.