'ಕಂಗುವ' ಶೂಟಿಂಗ್ ವೇಳೆ ಅಪಘಾತ: ನಟ ಸೂರ್ಯ ಆಸ್ಪತ್ರೆಗೆ ದಾಖಲು ‘ಕಂಗುವ‘ ಸಿನಿಮಾದ ಶೂಟಿಂಗ್‌ ವೇಳೆ ಕಾಲಿವುಡ್ ನಟ ಸೂರ್ಯ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈ: ‘ಕಂಗುವ‘ ಸಿನಿಮಾದ ಶೂಟಿಂಗ್‌ ವೇಳೆ ಕಾಲಿವುಡ್ ನಟ ಸೂರ್ಯ ಅವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಶೂಟಿಂಗ್ ವೇಳೆ ಸೂರ್ಯ ಅವರ ಭುಜದ ಮೇಲೆ ಕ್ಯಾಮೆರಾ ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಸ್ವತಃ ಸೂರ್ಯ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅಭಿಮಾನಿಗಳಿಗೆ ಅಭಯ ಹೇಳಿದ್ದಾರೆ.ಇದನ್ನೂ ಓದಿ: ನಟ ಸೂರ್ಯ ಹುಟ್ಟುಹಬ್ಬ: ಬ್ಯಾನರ್ ಹಾಕುವಾಗ ವಿದ್ಯುತ್ ಹರಿದು ಇಬ್ಬರು ಯುವಕರ ಸಾವುಆತಂಕ ಪಡುವಂಥದ್ದು ಏನೂ ಆಗಿಲ್ಲ. ಚೇತರಿಸಿಕೊಳ್ಳುತ್ತಿದ್ದೇನೆ. ಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.ಕಂಗುವ ಚಿತ್ರ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ಪುರಾತನ ಕಾಲದ ಫ್ಯಾಂಟಸಿ ಕಥಾ ಹಂದರ ಇರುವ ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ದಿಶಾ ಪಟಾನಿ ಹಾಗೂ ಖಳನಾಯಕನಾಗಿ ಬಾಬಿ ಡಿಯೋಲ್ ಬಣ್ಣ ಹಚ್ಚಿದ್ದಾರೆ.