'ಅರ್ಜುನ್ ಗೌಡ' ಸಿನಿಮಾವನ್ನು 'ಲಾಕಪ್ ಡೆತ್' ಥರ ಮಾಡಬೇಕೆಂದು ನಿರ್ಮಾಪಕ ರಾಮು ಆಶಿಸಿದ್ದರು: ಪ್ರಜ್ವಲ್ ದೇವರಾಜ್ ಚಿಕ್ಕಂದಿನಲ್ಲಿ, ರಾಮು ಅವರ ತೊಡೆಯ ಮೇಲೆ ಕುಳಿತು ಚಿತ್ರೀಕರಣ ವೀಕ್ಷಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡು ಪ್ರಜ್ವಲ್ ಭಾವುಕರಾಗುತ್ತಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ. ಬೆಂಗಳೂರು: 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದೊಂದಿಗೆ 2021 ವರ್ಷ ಆರಂಭಿಸಿದ್ದ ನಟ ಪ್ರಜ್ವಲ್ ದೇವರಾಜ್, 'ಅರ್ಜುನ್ ಗೌಡ' ಸಿನಿಮಾದೊಂದಿಗೆ ವರ್ಷವನ್ನು ಅಂತ್ಯಗೊಳಿಸುತ್ತಿದ್ದಾರೆ.ಇದನ್ನೂ ಓದಿ: 'ಅರ್ಜುನ್ ಗೌಡ' ಸಿನಿಮಾವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರೆದುರು ತರುವ ರಾಮು ಆಸೆಯನ್ನು ನಾನು ಪೂರೈಸುವೆ: ಮಾಲಾಶ್ರೀಅರ್ಜುನ್ ರೆಡ್ಡಿ ಸಿನಿಮಾ ನಿರ್ಮಾಪಕ ರಾಮು ಅವರು ಕಂಡ ಕನಸಾಗಿತ್ತು. ಲಕ್ಕಿ ಶಂಕರ್ ನಿರ್ದೇಶನದಲ್ಲಿ ಮೂಡಿಬಂಡಿರುವ ಅರ್ಜುನ್ ಗೌಡ ಸಿನಿಮಾವನ್ನು ಲಾಕಪ್ ಡೆತ್ ಥರ ಮಾಡಬೇಕು ಎನ್ನುವ ಇಚ್ಛೆಯನ್ನು ಹೊಂದಿದ್ದರು ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ. ರಾಮು ಸಿನಿಮಾ ಪೂರ್ತಿಗೊಳ್ಳುವುದಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ್ದರು.ಇದನ್ನೂ ಓದಿ: 'ಪ್ರಣಯಂ' ಸೆಟ್ ನಲ್ಲಿ ರಾಜವರ್ಧನ್ ಮತ್ತು ನೈನಾ ಗಂಗೂಲಿ ಹೊಸ ವರ್ಷಾಚರಣೆ!ಆಕ್ಷನ್ ಸಿನಿಮಾಗಳಿಗೆ ಹೆಸರಾದ ರಾಮು ಅವರ ಸಿನಿಮಾಗಳ ಆಕ್ಷನ್ ಸನ್ನಿವೇಶ ಚಿತ್ರೀಕರಣ ಸಂದರ್ಭದಲ್ಲಿ ತಾವೂ ಹಾಜರಿರುತ್ತಿದ್ದುದನ್ನು ಪ್ರಜ್ವಲ್ ದೇವರಾಜ್ ನೆನಪಿಸಿಕೊಂಡಿದ್ದಾರೆ. ರಾಮು ಅವರ ತೊಡೆಯ ಮೇಲೆ ಕುಳಿತು ಚಿತ್ರೀಕರಣ ವೀಕ್ಷಿಸುತ್ತಿದ್ದ ದಿನಗಳನ್ನು ನೆನೆಸಿಕೊಂಡು ಪ್ರಜ್ವಲ್ ಭಾವುಕರಾಗುತ್ತಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ.ಇದನ್ನೂ ಓದಿ: ಜನವರಿ 14ಕ್ಕೆ ಶರಣ್ ಅಭಿನಯದ 'ಅವತಾರ ಪುರುಷ' ಬಿಡುಗಡೆ