ದಕ್ಷಿಣ ಭಾರತದ ಖ್ಯಾತ ನಟ Shindeಗೆ ತೀವ್ರ ಎದೆನೋವು, ಆಸ್ಪತ್ರೆಗೆ ದಾಖಲು; ತುರ್ತು ಶಸ್ತ್ರಚಿಕಿತ್ಸೆ! ದಕ್ಷಿಣ ಭಾರತದ ಖ್ಯಾತ ನಟ ಸಯಾಜಿ ಶಿಂಧೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟ ಸಯಾಜಿ ಶಿಂಧೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ನಟ ಸಯಾಜಿ ಶಿಂಧೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಏಪ್ರಿಲ್ 11 ರಂದು ಸತಾರಾದಲ್ಲಿರುವ ಪ್ರತಿಭಾ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಮೂಲಗಳು ತಿಳಿಸಿರುವಂತೆ ಅವರ ಹೃದಯನಾಳಗಳಲ್ಲಿ ಬ್ಲಾಕೇಜ್ ಕಂಡುಬಂದಿತ್ತು. ಹೀಗಾಗಿ ವೈದ್ಯರು ಅವರಿಗೆ ತುರ್ತು ಆ್ಯಂಜಿಯೋಪ್ಲಾಸ್ಟಿ ( ) ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಹೇಳಲಾಗಿದೆ.ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ನಟ ಶಿಂಧೆ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಸಯಾಜಿ ಶಿಂಧೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. . 🙏 ../TTiOiaCLvDಪೋಸ್ಟ್ ಮಾಡಿರುವ ನಟಇನ್ನು ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ಶಿಂಧೆ“ಹಾಯ್, ನಾನು ಚೆನ್ನಾಗಿದ್ದೇನೆ. ನನ್ನನ್ನು ಪ್ರೀತಿಸುವ ಎಲ್ಲ ಅಭಿಮಾನಿಗಳಿಗೆ, ನನ್ನೊಂದಿಗಿರುವ ಹಿತೈಷಿಗಳಿಗೆ ಹೇಳುವುದೇನೆಂದರೆ, ನೀವು ಆತಂಕ ಪಡುವ ಅಗತ್ಯವಿಲ್ಲ., ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.ಅಂದಹಾಗೆ ನಟ ಶಿಂಧೆ, ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ, ಮರಾಠಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹೆಚ್ಚಾಗಿ ಖಳ ನಾಯಕನ ಪಾತ್ರವನ್ನೇ ನಿಭಾಯಿಸುತ್ತಿದ್ದರು. ಕನ್ನಡದ ವೀರಕನ್ನಡಿಗ ಚಿತ್ರದಲ್ಲಿ ಶಿಂಧೆ ಖಳನಟನಾಗಿ ಕಾಣಿಸಿಕೊಂಡಿದ್ದರು. ತೆಲುಗಿನ ಮಹೇಶ್ ಬಾಬು ನಟನೆಯ ಪೋಕಿರಿ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದರು. (@sayaji_shinde)