'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ಫಿಕ್ಸ್! ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜುಲೈ 21ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ಚಿತ್ರವು ಇದೀಗ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜುಲೈ 21ರಂದು ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ಚಿತ್ರವು ಕಮರ್ಷಿಯಲ್ ಆಗಿಯೂ ಯಶಸ್ಸು ಪಡೆಯಿತು. ತೆಲುಗು ಆವೃತ್ತಿಯಲ್ಲಿಯೂ ಬಿಡುಗಡೆಯಾದ ಚಿತ್ರ ಇದೀಗ ಸೆಪ್ಟೆಂಬರ್ 15 ರಂದು Zee5 ನಲ್ಲಿ ಬಿಡುಗಡೆಯಾಗಲಿದೆ.ರಕ್ಷಿತ್ ಶೆಟ್ಟಿ ಅವರ ಪರವಃ ಸ್ಟುಡಿಯೋಸ್ ಪ್ರಸ್ತುತಪಡಿಸಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಪ್ರಜ್ವಲ್ ಬಿಪಿ, ಮಂಜುನಾಥ್ ನಾಯಕ, ರಾಕೇಶ್ ರಾಜಕುಮಾರ್, ಶ್ರೀವತ್ಸ ಮತ್ತು ತೇಜಸ್ ಜಯಣ್ಣ ಅರಸ್ ಸೇರಿದಂತೆ ಬಹುತೇಕ ಹೊಸ ಕಲಾವಿದರನ್ನು ಒಳಗೊಂಡಿದೆ.ಚಿತ್ರದಲ್ಲಿ ರಿಷಬ್ ಶೆಟ್ಟಿ, ನಿರ್ದೇಶಕ ಪವನ್ ಕುಮಾರ್ ಮತ್ತು ಶೈನ್ ಶೆಟ್ಟಿ ಅವರಂತ ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಸುಮಾರು 500 ರಂಗಭೂಮಿ ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ.ಇದನ್ನೂ ಓದಿ: 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತೆಲುಗು ಆವೃತ್ತಿ 'ಬಾಯ್ಸ್ ಹಾಸ್ಟೆಲ್' ಬಿಡುಗಡೆಗೆ ಸಿದ್ಧನಿರ್ದೇಶಕ ನಿತಿನ್ ಕಷ್ಣಮೂರ್ತಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೆ, ವರುಣ್ ಗೌಡ, ಪ್ರಜ್ವಲ್ ಮತ್ತು ಛಾಯಾಗ್ರಾಹಕ ಅರವಿಂದ್ ಎಸ್. ಕಶ್ಯಪ್ ಅವರೊಂದಿಗೆ ಗುಲ್‌ಮೊಹರ್ ಫಿಲ್ಮ್ಸ್ ಮತ್ತು ವರನ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.