ಸೂಪರ್ ಸ್ಟಾರ್ ರಜಿನಿಕಾಂತ್ ಜಯನಗರ ಬಿಎಂಟಿಸಿ ಡಿಪೊಗೆ ದಿಢೀರ್ ಭೇಟಿ ನೀಡಿದಾಗ ಏನಾಯ್ತು?: ಡಿಪೊ ಮ್ಯಾನೇಜರ್ ಹೇಳ್ತಾರೆ ಓದಿ... ಜಯನಗರದ ಬಿಎಂಟಿಸಿ ಸಿಬ್ಬಂದಿ ನಿನ್ನೆ ಮಂಗಳವಾರ ಕೂಡ ಎಂದಿನಂತೆ ಡಿಪೊದಲ್ಲಿ ನಿತ್ಯದ ಕೆಲಸ ಆರಂಭಿಸಿದ್ದರು. ನಿನ್ನೆ ಒಂದು ವಿಶೇಷ ದಿನವಾಗುತ್ತದೆ ಎಂಬ ಸಣ್ಣ ಸುಳಿವು ಕೂಡ ಅವರಿಗೆ ಸಿಕ್ಕಿರಲಿಲ್ಲ. ಬೆಂಗಳೂರು: ಜಯನಗರದ ಬಿಎಂಟಿಸಿ ಸಿಬ್ಬಂದಿ ನಿನ್ನೆ ಮಂಗಳವಾರ ಕೂಡ ಎಂದಿನಂತೆ ಡಿಪೊದಲ್ಲಿ ನಿತ್ಯದ ಕೆಲಸ ಆರಂಭಿಸಿದ್ದರು. ನಿನ್ನೆ ಒಂದು ವಿಶೇಷ ದಿನವಾಗುತ್ತದೆ ಎಂಬ ಸಣ್ಣ ಸುಳಿವು ಕೂಡ ಅವರಿಗೆ ಸಿಕ್ಕಿರಲಿಲ್ಲ. ಬೆಳಗ್ಗೆ 11.30ರ ಸಮಯ ಇರಬಹುದು, ಜಯನಗರ ಬಸ್ಸು ಡಿಪೊದ ಭದ್ರತಾ ಸಿಬ್ಬಂದಿಗೆ, ಒಬ್ಬ ಹಿರಿಯ ವ್ಯಕ್ತಿ ಬಿಳಿ ಕುರ್ತಾ ಮತ್ತು ಧೋತಿ ಧರಿಸಿ ಬರುತ್ತಿರುವುದು ಕಾಣಿಸಿತು. ಜಾಗೃತನಾಗಿ ಸೂಕ್ಷ್ಮವಾಗಿ ನೋಡಿದಾಗ ಆ ವ್ಯಕ್ತಿ ಬೇರಾರು ಅಲ್ಲ, ಸೂಪರ್ ಸ್ಟಾರ್ ರಜಿನಿಕಾಂತ್.ಭದ್ರತಾ ಸಿಬ್ಬಂದಿ ಡಿಪೊದಲ್ಲಿ ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸುವ ಮುನ್ನವೇ ರಜಿನಿಕಾಂತ್ ಬಂದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಎಲ್ಲಾ ಸಿಬ್ಬಂದಿ ರಜಿನಿಕಾಂತ್ ಹತ್ತಿರ ಹೋಗಿ ಅವರನ್ನು ಮಾತನಾಡಿಸಿ, ಕೈಕುಲುಕಲು, ಫೋಟೋ, ವಿಡಿಯೊ ತೆಗೆಯಲು ಧಾವಂತದಿಂದ ಬಂದರು. @BMTC_BENGALURU #- # @. , , @ @ @ @ @santwana99 @ @Rajni_FC @ ../yF7cKqVqgu'ಕೂಡಲೇ ನಾವು ಗೇಟ್ ಬಳಿಗೆ ಹೋಗಿ ರಜಿನಿಕಾಂತ್ ಅವರನ್ನು ಸ್ವಾಗತಿಸಲು ಮುಂದಾದೆವು. ತಾವು ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿದ್ದ ಆರಂಭದ ದಿನಗಳಲ್ಲಿ ಕೆಲಸ ಮಾಡುತ್ತಿದ್ದ ಈ ಡಿಪೊವನ್ನು ಹೊರಗಿನಿಂದ ನೋಡಿ ಹೋಗಲು ಅವರು ಇಚ್ಛಿಸಿದ್ದರಂತೆ. ನಾವು ಒತ್ತಾಯ ಮಾಡಿ ಒಳಗೆ ಕರೆದಾಗ ಡಿಪೊ ಒಳಗೆ ಬಂದರು. ನಮ್ಮ ಎಲ್ಲಾ ಸಿಬ್ಬಂದಿಗೆ ಖುಷಿಯಾಯಿತು. ನಮಗೆ ಒಂದು ಕ್ಷಣ ಏನು ಮಾಡಬೇಕೆಂದೇ ತೋಚಲಿಲ್ಲ. ಅಲ್ಲಿ ಬಸ್ ಚಾಲಕರು, ಕಂಡಕ್ಟರ್ ಗಳು, ಮೆಕ್ಯಾನಿಕ್ ಗಳು ಹಾಗೂ ಇತರರು ಸೇರಿ ಸುಮಾರು 100 ಜನ ಇದ್ದರು. ರಜಿನಿಕಾಂತ್ ಅವರು ತಮ್ಮ ಹಳೆ ಗೆಳೆಯ ಬಿಎಂಟಿಸಿ ಡ್ರೈವರ್ ರಾಜ್ ಬಹದ್ದೂರ್ ಜೊತೆ ಬಂದಿದ್ದರು' ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದರು ಜಯನಗರ ಬಸ್ಸು ಡಿಪೊ ಮ್ಯಾನೇಜರ್ ರವೀಂದ್ರ ಬಿ. ಇದೇ ಗೆಳೆಯ ಬಹದ್ದೂರ್ ಅವರೇ ರಜಿನಿಕಾಂತ್ ಗೆ ನೀವು ಫಿಲ್ಮ್ ಲ್ಲಿ ಟ್ರೈ ಮಾಡಿ, ನಿನ್ನ ಲಕ್ ಬದಲಾಗಬಹುದು ಎಂದು ಹೇಳಿದ್ದಂತೆ.ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರು ರೌಂಡ್ಸ್: ಜಯನಗರ ಬಿಎಂಟಿಸಿ ಡಿಪೋ, ಚಾಮರಾಜಪೇಟೆ ರಾಯರ ಮಠಕ್ಕೆ ಭೇಟಿ''ನಮ್ಮ ಆಫೀಸು ಕೊಠಡಿ ಚಿಕ್ಕದು, ತುಂಬಾ ಜನ ನಿಲ್ಲಲು ಸಾಧ್ಯವಿಲ್ಲ, ಹೀಗಾಗಿ ಡಿಪೊ ಒಳಗೆ ಪೆಟ್ರೋಲ್ ಪಂಪ್ ಹತ್ತಿರ ಕುರ್ಚಿ ಹಾಕಿ ಅದರಲ್ಲಿ ರಜಿನಿಕಾಂತ್ ಕುಳಿತುಕೊಂಡು ಎಲ್ಲಾ ಸಿಬ್ಬಂದಿ ಜೊತೆ ಫೋಟೋಗೆ ಪೋಸ್ ಕೊಟ್ಟರು'' ಎನ್ನುತ್ತಾರೆ ರವೀಂದ್ರ. ಡಿಪೊದಲ್ಲಿ ಸುಮಾರು 20 ನಿಮಿಷ ಕಳೆದ ರಜಿನಿಕಾಂತ್ ಎಲ್ಲರ ಜೊತೆ ಫೋಟೋ ತೆಗೆಸಿಕೊಂಡು ಸೌಮ್ಯವಾಗಿ ನಗುತ್ತಾ ಕೈಬೀಸಿ ತಮ್ಮ ಕಾರು ಹತ್ತಿ ಹೋದರು'' ಎಂದರು.ರಜಿನಿಕಾಂತ್ ಅವರ ಇತ್ತೀಚಿನ ಜೈಲರ್ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ರಜಿನಿಕಾಂತ್ ಬಂದಾಗ ಇಲ್ಲಿ ಇದ್ದ ಸಿಬ್ಬಂದಿಗೆ ಅಪಾರ ಸಂತೋಷವಾದರೆ ಇನ್ನು ಹಲವರು ನಂತರ ಬಂದವರು ಛೇ ನಮಗೆ ಅವರನ್ನು ನೋಡುವ ಅವಕಾಶ, ಅದೃಷ್ಟ ಮಿಸ್ ಆಯ್ತಲ್ಲಾ ಎಂದು ಬೇಜಾರು ಮಾಡಿಕೊಂಡರು.ರಜಿನಿಕಾಂತ್ ಅವರ ಸರಳತೆಗೆ ಎಲ್ಲರೂ ಮನಸೋತರು.ತಾವು ಏನೂ ಇಲ್ಲದಿದ್ದಾಗ, ತಮ್ಮ ಬಾಲ್ಯ, ಯೌವ್ವನದ ಆರಂಭ ದಿನಗಳನ್ನು ಕಳೆದ ಬೆಂಗಳೂರಿಗೆ ರಜಿನಿಕಾಂತ್ ಆಗಾಗ ಬಂದು ಹೋಗುತ್ತಿರುತ್ತಾರೆ. ಆದರೆ ಈ ಬಾರಿ ಅವರು ಎಲ್ಲಿಗೆ ಬರುತ್ತಾರೆ ಎಂಬ ಸುಳಿವನ್ನು ನೀಡೇ ಇರಲಿಲ್ಲ. ಕಂಡಕ್ಟರ್ ಆಗಿದ್ದಾಗ ರಜಿನಿಕಾಂತ್ ಮೆಜೆಸ್ಟಿಕ್ ನಿಂದ ಶಿವಾಜಿನಗರಕ್ಕೆ ರೂಟ್ ನಂಬರ್ 10ಎಯಲ್ಲಿ ಕೆಲಸ ಮಾಡುತ್ತಿದ್ದರಂತೆ.ಇದನ್ನೂ ಓದಿ: ರಜಿನಿಕಾಂತ್-ಶಿವರಾಜ್‌ಕುಮಾರ್-ಮೋಹನ್‌ಲಾಲ್ ಅಭಿನಯದ ಜೈಲರ್ ಸಿನಿಮಾ ಮೊದಲ ವಾರ ಗಳಿಸಿದ್ದೆಷ್ಟು?ಜಯನಗರಕ್ಕೆ ಭೇಟಿ ನೀಡುವ ಮುನ್ನ ರಜಿನಿಕಾಂತ್ ಚಾಮರಾಜಪೇಟೆಯ ರಾಘವೇಂದ್ರ ಮಠದ ಶ್ರೀಪತಿ ಅಗ್ರಹಾರಕ್ಕೆ ಹೋಗಿದ್ದರು. ಇಲ್ಲಿಗೆ ಸಹ ತಮಿಳು ಚಿತ್ರರಂಗಕ್ಕೆ ಕಾಲಿಡುವ ಮುನ್ನ ಬೆಂಗಳೂರಿನಲ್ಲಿದ್ದಾಗ ರಜಿನಿಕಾಂತ್ ಆಗಾಗ ಹೋಗುತ್ತಿದ್ದರಂತೆ.ವಿದ್ಯಾರ್ಥಿಭವನ ಮಸಾಲೆ ದೋಸೆ, ಮೈಯ್ಯ ಕಾಫಿ: ತನ್ನ ಹಳೆಯ ಸ್ನೇಹಿತ ರಾಜ್ ಬಹದ್ದೂರ್ ನ್ನು ಭೇಟಿ ಮಾಡುವ ಮುನ್ನ ನಿನ್ನೆ ಬೆಂಗಳೂರಿನಲ್ಲಿ ರಜಿನಿಕಾಂತ್ ಬಸವನಗುಡಿಯ ವಿದ್ಯಾರ್ಥಿ ಭವನದಿಂದ ಬೆಣ್ಣೆ ಮಸಾಲೆ ದೋಸೆಯನ್ನು ತರಿಸಿಕೊಂಡು ಸವಿದಿದ್ದರಂತೆ. ಇನ್ನು ಜಯನಗರದಲ್ಲಿರುವ ಮೈಯ್ಯ ಔಟ್ ಲೆಟ್ ನಲ್ಲಿ ಬಸ್ ಡಿಪೊಗೆ ಬರುವ ಮುನ್ನ ಕಾಫಿ ಕುಡಿದಿದ್ದರಂತೆ.!!! @BMTC_BENGALURU @ @ @ @RLR_BTM @ @ @ash_rajinikanth ../qEV31qslnq