ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ ನಟಿ ಸಂಯುಕ್ತಾ ಹೊರನಾಡ್ ಆಸಕ್ತಿದಾಯಕ ಸಿನಿಮಾಗಳೊಂದಿಗೆ ಸಖತ್ ಬ್ಯುಸಿಯಾಗಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದಲ್ಲೂ ನಟಿಸಿರುವ ಹೊಂದಿಸಿ ಬರೆಯಿರಿ ಮತ್ತು ಕ್ರಾಂತಿ ಸಿನಿಮಾ ನಟಿ, ಇದೀಗ ಕಿಚ್ಚ 46 ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. ನಟಿ ಸಂಯುಕ್ತಾ ಹೊರನಾಡ್ ಆಸಕ್ತಿದಾಯಕ ಸಿನಿಮಾಗಳೊಂದಿಗೆ ಸಖತ್ ಬ್ಯುಸಿಯಾಗಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದಲ್ಲೂ ನಟಿಸಿರುವ ಹೊಂದಿಸಿ ಬರೆಯಿರಿ ಮತ್ತು ಕ್ರಾಂತಿ ಸಿನಿಮಾ ನಟಿ, ಇದೀಗ ಕಿಚ್ಚ 46 ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. ಕಿಚ್ಚ ಸುದೀಪ್ ಅವರ ಮುಂದಿನ ತಾತ್ಕಾಲಿಕ ಶೀರ್ಷಿಕೆಯಾದ ಕಿಚ್ಚ 46 ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರವು ಸದ್ಯ ಮಹಾಬಲೇಶ್ವರದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಸಂಯುಕ್ತಾ ಇದೀಗ ಸೆಟ್‌ಗೆ ಸೇರಿಕೊಂಡಿದ್ದಾರೆ ಮತ್ತು ಸುದೀಪ್ ಅವರೊಂದಿಗೆ ತಮ್ಮ ಭಾಗದ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ ಎಂದು ವರದಿಯಾಗಿದೆ. (@)ಕಲೈಪುಲಿ ಥಾನು ಅವರ ವಿ ಕ್ರಿಯೇಷನ್ಸ್ ಮತ್ತು ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನಪ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಚಿತ್ರಕ್ಕೆ ಕಲಾ ನಿರ್ದೇಶಕ ಶಿವಕುಮಾರ್, ಸಂಯೋಜಕ ಅಜನೀಶ್ ಲೋಕನಾಥ್ ಮತ್ತು ಛಾಯಾಗ್ರಾಹಕ ಶೇಖರ್ ಚಂದ್ರ ಸೇರಿದಂತೆ ಪ್ರಬಲ ತಾಂತ್ರಿಕ ಸಿಬ್ಬಂದಿ ಇದ್ದಾರೆ.ಇದನ್ನೂ ಓದಿ: ಪಾತ್ರಗಳಲ್ಲಿ ನಿರಂತರ ಬದಲಾವಣೆ ಬಯಸುತ್ತೇನೆ: ಸಂಯುಕ್ತಾ ಹೊರ್ನಾಡುವಿ ಕ್ರಿಯೇಷನ್ಸ್ ಮತ್ತು ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ಸಂಯೋಜಕ ಅಜನೀಶ್ ಬಿ ಲೋಕನಾಥ್ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.ವಿಕ್ರಾಂತ್ ರೋಣ ಸಿನಿಮಾ ನಂತರ ಅಜನೀಶ್ ಸುದೀಪ್ ಅವರೊಂದಿಗೆ ಎರಡನೇ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಇನ್ನುಳಿದ ತಾರಾಗಣ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.