ಮತ್ತಷ್ಟು ಬಿಗಡಾಯಿಸಿದ ನಟಿ ಸಮಂತಾ ಆರೋಗ್ಯ ಸಮಸ್ಯೆ: ಹೆಚ್ಚಿನ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಗೆ ಶಿಫ್ಟ್? ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕೆಲ ದಿನಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಸಮಂತಾ ಸ್ಥಿತಿ ಸ್ವಲ್ಪ ಚಿಂತಾಜನಕವಾಗಿದೆ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಸಮಂತಾ ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಕೆಲ ದಿನಗಳಿಂದ ಮಯೋಸಿಟಿಸ್ ನಿಂದ ಬಳಲುತ್ತಿರುವುದು ಗೊತ್ತೇ ಇದೆ. ಆದರೆ ಇದೀಗ ಸಮಂತಾ ಸ್ಥಿತಿ ಸ್ವಲ್ಪ ಚಿಂತಾಜನಕವಾಗಿದೆ. ಹೀಗಾಗಿ ಉತ್ತಮ ಚಿಕಿತ್ಸೆಗಾಗಿ ಸಮಂತಾ ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಆರೋಗ್ಯದ ಬಗ್ಗೆ ಆಗಾಗ್ಗೆ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಸಮಂತಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮೊದಲು ಸುದ್ದಿ ಆಯಿತು. ಅದನ್ನು ಅವರ ಮ್ಯಾನೇಜರ್ ಅಲ್ಲಗಳೆದರು. ನಂತರ ಸ್ವತಃ ಸಮಂತಾ ಅವರೇ ತಮಗಿರುವ ಮಯೋಸಿಟಿಸ್ ಕಾಯಿಲೆ ಕುರಿತಂತೆ ಬರೆದುಕೊಂಡರು. ಫೋಟೋ ಸಮೇತ ಹಾಕಿ, ಚಿಕಿತ್ಸೆ ಪಡೆಯುತ್ತಿರುವ ಕುರಿತು ಹೇಳಿಕೊಂಡರು.ಇದನ್ನೂ ಓದಿ: 'ಯಶೋದಾ' ಸಿನಿಮಾ ಯಶಸ್ಸು: ನಾನು ಕ್ಲೌಡ್ ನೈನ್‌ನಲ್ಲಿ ಇದ್ದೇನೆ ಎಂದ ನಟಿ ಸಮಂತಾಇದಾದ ನಂತರ ಅವರು ಯಶೋದಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡರು. ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮತ್ತೆ ಅವರ ಆರೋಗ್ಯದ ಬಗ್ಗೆಯೇ ಮತ್ತೊಂದು ಸುತ್ತಿನ ಚರ್ಚೆ ಶುರುವಾಯಿತು. ಅವರ ಮ್ಯಾನೇಜರ್ ಈ ಕುರಿತು ಮತ್ತೆ ಸ್ಪಷ್ಟಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆದರೆ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಯಾವುದೇ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ಯಾಮೆರಾ ಮುಂದೆಯೂ ಬರಲಿಲ್ಲ.ಮೊದಲು ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಅದಕ್ಕೆ ಔಷಧಿ ಪಡೆದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ.