ಕೆಜಿಎಫ್ ದಾಖಲೆ ಮುರಿದ ಕಾಂತಾರ! ಹೊಂಬಾಳೆ ಫಿಲಂಸ್ ನಿಂದ ಅಧಿಕೃತ ಘೋಷಣೆ ಸದ್ಯ ಎಲ್ಲೆಲ್ಲೂ ಕಾಂತಾರದ್ದೇ ಸದ್ದು. ಕರಾವಳಿಯ ವಿಶಿಷ್ಠ ಸಂಸ್ಕೃತಿ ಅನಾವರಣದ ಕಾಂತಾರ ಸಿನಿಮಾ ದೇಶ, ವಿದೇಶಗಳ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವಂತೆಯೇ, ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬೆಂಗಳೂರು: ಸದ್ಯ ಎಲ್ಲೆಲ್ಲೂ ಕಾಂತಾರದ್ದೇ ಸದ್ದು. ಕರಾವಳಿಯ ವಿಶಿಷ್ಠ ಸಂಸ್ಕೃತಿ ಅನಾವರಣದ ಕಾಂತಾರ ಸಿನಿಮಾ ದೇಶ, ವಿದೇಶಗಳ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿರುವಂತೆಯೇ, ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ.ರಾಜ್ಯದಲ್ಲಿ ಮೂರನೇ ವಾರವೂ ಜನಭರಿತ ಸಿನಿಮಾವಾಗಿ ಪ್ರದರ್ಶನ ಕಾಣುತ್ತಿದ್ದು, ಕೆಜಿಎಫ್ ದಾಖಲೆಯನ್ನು ಮುರಿದಿದೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಮುನ್ನುಗಿದೆ.ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ ವಿರುದ್ಧ ದೂರು ದಾಖಲು!, ರಿಷಬ್ ಹೇಳಿದ್ದೇನು?ಈ ಕುರಿತು ಟ್ವೀಟ್ ನಲ್ಲಿ ಅಧಿಕೃತ ಮಾಹಿತಿ ನೀಡಿರುವ ಹೊಂಬಾಳೆ ಫಿಲಂಸ್ ಸಂಸ್ಥೆ, ಈವರೆಗೆ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿದೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಕಾಂತಾರ ಸಾಗುತ್ತಿರುವುದಾಗಿ ತಿಳಿಸಿದೆ.ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ.. ಧನ್ಯವಾದ ಕರ್ನಾಟಕ. # # ../i1yr4lSazG.# #77lakh # 25 #. @ @ @shetty_rishab . ../Zm7wa3e6pHರಿಷಬ್ ಶೆಟ್ಟಿ ಚಿತ್ರಕಥೆ ಬರೆದು, ನಿರ್ದೇಶಿಸಿರುವ ಜೊತೆಗೆ ಅವರೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.