"ಮಗಳು ಜಾನಕಿ" ಖ್ಯಾತಿಯ ಕಿರುತೆರೆ ಕಲಾವಿದ ಮಂಡ್ಯ ರವಿ ಆರೋಗ್ಯ ಸ್ಥಿತಿ ಗಂಭೀರ ಕಿರುತೆರೆ ಕಲಾವಿದ ಮಂಡ್ಯ ರವಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು: ಕಿರುತೆರೆ ಕಲಾವಿದ ಮಂಡ್ಯ ರವಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಮಂಡ್ಯ ರವಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.ಕಿರುತೆರೆ ನಿರ್ದೆಶಕ ಟಿಎನ್ ಸೀತಾರಾಮ್ ಅವರ ಮುಕ್ತ ಮುಕ್ತ, ಮಗಳು ಜಾನಕಿ ಮುಂತಾದ ಧಾರಾವಾಹಿಗಳಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಮಂಡ್ಯ ರವಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ.ಇದನ್ನೂ ಓದಿ: 'ಮತ್ತೆ ಮಾಯಾಮೃಗ' ಮೂಲಕ ಕಿರುತೆರೆಗೆ ಮರಳಿದ ನಿರ್ದೇಶಕ ಟಿ.ಎನ್. ಸೀತಾರಾಮ್; ಸಿರಿಕನ್ನಡ ಚಾನೆಲ್ ನಲ್ಲಿ ಪ್ರಸಾರಮಂಡ್ಯ ರವಿ ಅವರಿಗೆ ಕಿಡ್ನಿ ಸಮಸ್ಯೆ ಇದ್ದು, ಜಾಂಡೀಸ್ ಸಹ ಎದುರಾಗಿರುವುದು ಆರೋಗ್ಯ ಪರಿಸ್ಥಿತಿ ಹದಗೆಡಲು ಕಾರಣ ಎಂದು ತಿಳಿದುಬಂದಿದೆ.