ರಂಗಸಮುದ್ರದ ದೇಸಿ ಮೋಹನ್'ರ ಹೊಸ ಹಾಡಿಗೆ ಎಂಎಂ ಕೀರವಾಣಿ ಧ್ವನಿ ರಂಗಸಮುದ್ರ ಸಿನಿಮಾ ಪದ್ಮಶ್ರೀ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಮಾಂತ್ರಿಕ ಎಂಎಂ ಕೀರವಾಣಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ತರುತ್ತಿದೆ. ಬಾಹುಬಲಿ, ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಕೀರವಾಣಿ, ದೇಸಿ ಮೋಹನ್ ಅವರ ಸಂಗೀತದೊಂದಿಗೆ ರೆಟ್ರೋ ಸಿನಿಮಾದ ಒಂದು ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ರಂಗಸಮುದ್ರ ಸಿನಿಮಾ ಪದ್ಮಶ್ರೀ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಮಾಂತ್ರಿಕ ಎಂಎಂ ಕೀರವಾಣಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ತರುತ್ತಿದೆ. ಬಾಹುಬಲಿ, ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಕೀರವಾಣಿ, ದೇಸಿ ಮೋಹನ್ ಅವರ ಸಂಗೀತದೊಂದಿಗೆ ರೆಟ್ರೋ ಸಿನಿಮಾದ ಒಂದು ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.ಈ ಬಗ್ಗೆ ನಿರ್ದೇಶಕ ರಾಜ್‌ಕುಮಾರ್ ಅಸ್ಕಿ ಮತ್ತು ಗೀತೆ ರಚನೆಕಾರ ವಾಗೀಶ್ ಚನ್ನಗಿರಿ ಹರ್ಷ ವ್ಯಕ್ತಪಡಿಸಿದ್ದು, ಕೀರವಾಣಿ ಅವರ ಧ್ವನಿ ಸೇರ್ಪಡೆಯಿಂದಾಗಿ ಸಿನಿಮಾ ಗಮನಾರ್ಹವಾಗಿ ಮೇಲೇಳಲಿದೆ ಎಂದಿದ್ದಾರೆ. ಹಲವು ವರ್ಷಗಳ ನಂತರ ಕೀರವಾಣಿ ಅವರನ್ನು ಗೌರವ ಮತ್ತು ಪ್ರೀತಿಯಿಂದ ಸಂಪರ್ಕಿಸಿ, ಹೈದರಾಬಾದ್‌ಗೆ ಆಹ್ವಾನಿಸಿದ್ದೇವು.ಅಲ್ಲಿ ಅವರು ಹಾಡಿಗೆ ಧ್ವನಿ ನೀಡಲು ಒಪ್ಪಿಕೊಂಡರು ಎಂದು ನಿರ್ದೇಶಕರು ಹೇಳಿದರು.ಇದನ್ನೂ ಓದಿ: ಸ್ಫೂರ್ತಿಯಾದ ವ್ಯಕ್ತಿಗೆ ಎಲ್ಎಎಫ್ ಸಿಎ ಪ್ರಶಸ್ತಿ ಕಾರ್ಯಕ್ರಮದಲ್ಲಿ ಧನ್ಯವಾದ ಅರ್ಪಿಸಿದ ಎಂಎಂ ಕೀರವಾಣಿಕೀರವಾಣಿ ಅವರು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಣ್ಣ ಕೊಠಡಿಯಲ್ಲಿ ತಂಗಿದ್ದ ದಿನಗಳು ಹಾಗೂ ಆತ್ಮೀಯ ಸ್ನೇಹಿತ ದೊಡ್ಡಣ್ಣ ಅವರನ್ನು ಹೆಚ್ಚು ನೆನೆಸಿಕೊಂಡರು. ಬಿಡುಗಡೆಯಾದ ಮೇಲೆ ರಾಜಮೌಳಿ ಜೊತೆಗೆ ಚಿತ್ರವನ್ನು ವೀಕ್ಷಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ನಿರ್ಮಾಪಕರು ತಿಳಿಸಿದರು. ಹೆಸರಾಂತ ಗಾಯಕರಾದ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಮತ್ತು ದೇಸಿ ಮೋಹನ್ ನಾಲ್ಕು ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದು, ನವೀನ್ ಸಜ್ಜು ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದಾರೆ. ಹೊಯ್ಸಳ ನಿರ್ಮಾಣದ ರಂಗಸಮುದ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಂಗಾಯಣ ರಘು, ಸಂಪತ್ ರಾಜ್, ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ, ಉಗ್ರಂ ಮಂಜು, ಕಾರ್ತಿಕ್ ರಾವ್, ದಿವ್ಯಾಗೌಡ, ಮಹೇಂದ್ರ ಮತ್ತಿತರರ ತಾರಾಗಣವಿದೆ. ಜನವರಿ 12 ರಂದು ರಂಗಸಮುದ್ರ ಬಿಡುಗಡೆಯಾಗಲಿದೆ.