ಬಾಲಿವುಡ್ ನಲ್ಲಿ ಚೊಚ್ಚಲ ನಟನೆ ನನಗೆ ಕೇಕ್ ಮೇಲಿನ ಐಸ್ ನಂತೆ, ಇನ್ನೂ ಸಾಕಷ್ಟು ಕಲಿಯಬೇಕು: ರಾಗಿಣಿ ದ್ವಿವೇದಿ ಇಷ್ಟು ದಿನ ದಕ್ಷಿಣ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ನಟಿಸಿರುವ ರಾಗಿಣಿ ದ್ವಿವೇದಿ ಭಯಾನಕ ಚಿತ್ರ ವಾಕರ್ ಹೌಸ್ ಎಂಬ ಹಾರರ್ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ರಾಗಿಣಿ ಜೊತೆಗೆ ಕಹಾನಿ ಖ್ಯಾತಿಯ ಪರಂಬ್ರತ ಚಟರ್ಜಿ ನಟಿಸಿದ್ದಾರೆ. ಇಷ್ಟು ದಿನ ದಕ್ಷಿಣ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ನಟಿಸಿರುವ ರಾಗಿಣಿ ದ್ವಿವೇದಿ ಭಯಾನಕ ಚಿತ್ರ ವಾಕರ್ ಹೌಸ್ ಎಂಬ ಹಾರರ್ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ಚಿತ್ರದಲ್ಲಿ ರಾಗಿಣಿ ಜೊತೆಗೆ ಕಹಾನಿ ಖ್ಯಾತಿಯ ಪರಂಬ್ರತ ಚಟರ್ಜಿ ನಟಿಸಿದ್ದಾರೆ.ಈ ಹಿಂದೆ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಆಯುಷ್ ವಾಕರ್ ಹೌಸ್ ನ್ನು ತಮ್ಮ ಮೊದಲ ಚಲನಚಿತ್ರವಾಗಿ ನಿರ್ದೇಶಿಸಲಿದ್ದಾರೆ. ಶೇಕಡಾ 60ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದ ಪ್ರಮುಖ ಭಾಗಗಳನ್ನು ಲಂಡನ್‌ನ ಅತ್ಯಂತ ಸುಂದರ ತಾಣಗಳಲ್ಲಿ ಸೆರೆಹಿಡಿಯಲಾಗಿದೆ. ಈ ಹಿಂದೆ ಧೂಮ್ 2 ಮತ್ತು ಬ್ಯಾಂಗ್ ಬ್ಯಾಂಗ್‌ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ವಿಕಾಸ್, ನಿರ್ಮಾಪಕ ಮೋಹನ್ ಬೆಂಬಲದೊಂದಿಗೆ ವಾಕರ್ ಹೌಸ್‌ನ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಸುದೀರ್ಘ ಸಮಯ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿರುವ ರಾಗಿಣಿ ದ್ವಿವೇದಿ ಸಿನಿಮಾಗಳು ಈಗ ಸಾರ್ವತ್ರಿಕವಾಗಿವೆ ಎಂದು ಹೇಳುತ್ತಾರೆ. ನಮಗೆ ಈಗ ಭಾಷೆಯ ಅಡೆತಡೆಗಳಿಲ್ಲ. ಭಾಷೆಯ ಹೊರತಾಗಿ ಉತ್ತಮ ಚಿತ್ರಕಥೆಯು ನಟನನ್ನು ಪ್ರಚೋದಿಸುತ್ತದೆ.ನಾನು ಪಂಜಾಬಿ, ನನ್ನ ವೃತ್ತಿಜೀವನವನ್ನು ಕನ್ನಡದಲ್ಲಿ ಪ್ರಾರಂಭಿಸಿದೆನು. ನಾನು ನಿಧಾನವಾಗಿ ಬೇರೆ ಬೇರೆ ಭಾಷೆಗಳಲ್ಲಿ ನಟಿಸಲು ಆರಂಭಿಸಿದೆ. ಇಂದು ಕನ್ನಡ ಚಿತ್ರಗಳು ಪ್ಯಾನ್-ಇಂಡಿಯಾ ಮಟ್ಟದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಬಾಲಿವುಡ್ ನಲ್ಲಿ ನನ್ನ ನಟನೆ ಕೇಕ್ ಮೇಲೆ ಐಸ್ ಇಟ್ಟಂತೆ, ಇದು ಬಾಲಿವುಡ್ ನ ಪಯಣ ಆರಂಭ ಎಂದರು.ಪ್ರಸ್ತುತ ವಾಕರ್ ಹೌಸ್ ಮೇಲೆ ಗಮನಹರಿಸಿರುವ ರಾಗಿಣಿ, ಇನ್ನೂ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. “ನಾನು 2022 ರಲ್ಲಿ ಕೆಲವು ಅದ್ಭುತವಾದ ಚಿತ್ರಗಳಲ್ಲಿ ನಟಿಸಿದ್ದೇನೆ. ಅವೆಲ್ಲವೂ ಈ ವರ್ಷ ಬಿಡುಗಡೆಯಾಗುತ್ತವೆ. ನಾನು ಒಂದು ಕನ್ನಡ ಚಿತ್ರ, ಎರಡು ತಮಿಳು ಚಿತ್ರಗಳು, ತೆಲುಗು ಚಿತ್ರ ಮತ್ತು ಒಂದು ಮಲಯಾಳಂ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ, ಅದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗ ಬಿ-ಟೌನ್‌ ಗೆ ನನ್ನ ಚೊಚ್ಚಲ ಪ್ರವೇಶವು ಕೇಕ್ ಮೇಲಿನ ಐಸ್ ಆಗಿದೆ. ನಾನು ಇದನ್ನು ಬಾಲಿವುಡ್‌ನಲ್ಲಿ ಕೇವಲ ಒಂದು ಆರಂಭ ಎಂದು ನೋಡುತ್ತೇನೆ ಎಂದರು.