ಜೋಗಿ ಪ್ರೇಮ್ ನಿರ್ದೇಶನದ - ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾಕ್ಕೆ 'ಕ್ರೇಜಿ ಸ್ಟಾರ್' ಖಡಕ್ ಎಂಟ್ರಿ! ನಿರ್ದೇಶಕ ಪ್ರೇಮ್‌ ಸಿನಿಮಾದ ಒಂದೊಂದೇ ಪಾತ್ರವನ್ನು ಪರಿಚಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರೇಮ್‌ ಪರಿಚಯ ಮಾಡಿರುವ ಮೊದಲ ಪಾತ್ರ ಅಣ್ಣಯ್ಯಪ್ಪ. ಈ ಪಾತ್ರವನ್ನು ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಿರ್ವಹಿಸುತ್ತಿದ್ದು, ಅವರ ಭರ್ಜರಿ ಲುಕ್‌ ಹೊಸ ವರ್ಷದಂದು ಬಹಿರರಗಗೊಳಿಸಿದೆ. ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್‌ ಕಾಂಬಿನೇಷನ್‌ ಸಿನಿಮಾ ಬರ್ತಿದೆ ಎಂದಾಗಲೇ ಒಂದಷ್ಟು ಕುತೂಹಲಗಳು ಗರಿಗೆದರಿದ್ದವು. ನಿರೀಕ್ಷೆಯೂ ಅಷ್ಟೇ ಜೋರಾಗಿತ್ತು. ಅದರಂತೆ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ‘ಕೆಡಿ’ ಚಿತ್ರದ ಶೀರ್ಷಿಕೆ ಅನಾವರಣದ ಟೀಸರ್‌ ಎಲ್ಲರ ಗಮನ ಸೆಳೆದಿತ್ತು. ಇದೀಗ ಇದೇ ‘ಕೆಡಿ’ಅಂಗಳದಿಂದ ಹೊಸ ಸುದ್ದಿಯನ್ನು ಹೊರತಂದಿದ್ದಾರೆ ಪ್ರೇಮ್.‌ನಿರ್ದೇಶಕ ಪ್ರೇಮ್‌ ಸಿನಿಮಾದ ಒಂದೊಂದೇ ಪಾತ್ರವನ್ನು ಪರಿಚಯಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರೇಮ್‌ ಪರಿಚಯ ಮಾಡಿರುವ ಮೊದಲ ಪಾತ್ರ ಅಣ್ಣಯ್ಯಪ್ಪ. ಈ ಪಾತ್ರವನ್ನು ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಿರ್ವಹಿಸುತ್ತಿದ್ದು, ಅವರ ಭರ್ಜರಿ ಲುಕ್‌ ಅನ್ನು ಹೊಸ ವರ್ಷದಂದು ಚಿತ್ರತಂಡ ರಿವೀಲ್‌ ಮಾಡಿದೆ.‘ಕೆಡಿ’ ರೆಟ್ರೋ ಸ್ಟೈಲ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ರೌಡಿಯಾಗಿ ನಟಿಸುತ್ತಿದ್ದಾರೆ. ಈ ಕೆಡಿಯ ಜತೆ ಇನ್ನಷ್ಟು ಕೆಡಿಗಳು ನಟಿಸುತ್ತಾರೆ ಎಂಬುದು ಸಹ ಈಗಾಗಲೇ ಗೊತ್ತಾಗಿದೆ. ಚಿತ್ರತಂಡವೇ ಹೇಳಿರುವ ಪ್ರಕಾರ ಸಂಜಯ್‌ ದತ್‌ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಸಹ ನಟಿಸಲಿದ್ದಾರೆ ಎಂಬುದು ಪೋಸ್ಟರ್‌ನಿಂದ ಗೊತ್ತಾಗುತ್ತಿದೆ. ರವಿಚಂದ್ರನ್‌ ರೆಟ್ರೋ ಸ್ಟೈಲ್‌ನ ಕಾಸ್ಟ್ಯೂಮ್‌ ಮತ್ತು ಹೇರ್‌ ಸ್ಟೈಲ್‌ನಿಂದ ಮಿಂಚುತ್ತಿದ್ದಾರೆ.ಇದನ್ನೂ ಓದಿ: ತಮ್ಮ 2ನೇ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಕ್ರಮ್ ರವಿಚಂದ್ರನ್ಈ ಸಿನಿಮಾ ಕನ್ನಡ, ತೆಲಗು, ತಮಿಳು, ಹಿಂದಿ , ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗುತ್ತಿತ್ತು. ಇದಕ್ಕಾಗಿ ಧ್ರುವ ಸರ್ಜಾ ತಮ್ಮ ದೇಹತೂಕವನ್ನು ಕೊಂಚ ಕಡಿಮೆ ಮಾಡಲಿದ್ದಾರಂತೆ. ಜತೆಗೆ ಲುಕ್‌ ಮೇಲೂ ಕೆಲಸವಾಗುತ್ತಿದ್ದು, ಅದು ಕೂಡ ವಿಭಿನ್ನವಾಗಿರಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ವಿಲಿಯಂ ಡೇವಿಡ್‌ ಸಿನಿಮಾಟೋಗ್ರಾಫರ್‌ ಆಗಿದ್ದಾರೆ.'ಕೆಡಿ' ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು ಟೈಟಲ್ ಟೀಸರ್‌ಗೆ ವಿಜಯ್‌ ಸೇತುಪತಿ ಧ್ವನಿ ನೀಡಿದರೆ, ಮಲಯಾಳಂ ಟೈಟಲ್ ಟೀಸರ್‌ಗೆ ಮೋಹನ್‌ಲಾಲ್‌ ಹಾಗೂ ಹಿಂದಿ ಟೈಟಲ್ ಟೀಸರ್‌ಗೆ ಸಂಜಯ್‌ ದತ್‌ ಧ್ವನಿ ನೀಡಿದ್ದರು. , "" . ' ! ! 2023 . # @ @ ../jedAWiNwc9