ಮಾಸಾಂತ್ಯಕ್ಕೆ ರಾಗಿಣಿ ದ್ವಿವೇದಿಯ ದ್ವಿಭಾಷಾ ಚಿತ್ರ 'ಶೀಲಾ' ಬಿಡುಗಡೆ ರಾಗಿಣಿ ದ್ವಿವೇದಿ ದ್ವಿಭಾಷೆಗಳಲ್ಲಿ ನಟಿಸಿರುವ 'ಶೀಲಾ' ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಬಾಲು ನಾರಾಯಣನ್ ನಿರ್ದೇಶನದ ಮತ್ತು ಡಿಎಂ ಪಿಳ್ಳೈ ನಿರ್ಮಿಸಿರುವ ಈ ಚಿತ್ರವು ಈ ತಿಂಗಳ ಅಂತ್ಯದ ವೇಳೆಗೆ ತೆರೆಗೆ ಬರಲಿದೆ. ಮಾಧ್ಯಮ ಸಂವಾದದಲ್ಲಿ ರಾಗಿಣಿ ಶೀಲಾ ಪಾತ್ರದ ಒಳನೋಟಗಳ ಬಗ್ಗೆ ಹಂಚಿಕೊಂಡರು. ರಾಗಿಣಿ ದ್ವಿವೇದಿ ದ್ವಿಭಾಷೆಗಳಲ್ಲಿ ನಟಿಸಿರುವ 'ಶೀಲಾ' ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಬಾಲು ನಾರಾಯಣನ್ ನಿರ್ದೇಶನದ ಮತ್ತು ಡಿಎಂ ಪಿಳ್ಳೈ ನಿರ್ಮಿಸಿರುವ ಈ ಚಿತ್ರವು ಈ ತಿಂಗಳ ಅಂತ್ಯದ ವೇಳೆಗೆ ತೆರೆಗೆ ಬರಲಿದೆ. ಮಾಧ್ಯಮ ಸಂವಾದದಲ್ಲಿ ರಾಗಿಣಿ ಶೀಲಾ ಪಾತ್ರದ ಒಳನೋಟಗಳ ಬಗ್ಗೆ ಹಂಚಿಕೊಂಡರು. ದಿನನಿತ್ಯ ಸಮಾಜದಲ್ಲಿ ಹುಡುಗಿಯರು ಎದುರಿಸುತ್ತಿರುವ ಅಸಂಖ್ಯಾತ ಸವಾಲುಗಳ ಸುತ್ತ ಚಿತ್ರ ಕಥೆ ಹೆಣೆಯಲಾಗಿದೆ. ಹೆಣ್ಣು ಮನಸ್ಸು ಮಾಡಿದರೆ, ತನ್ನಗೆದುರಾಗುವ ಸಮಸ್ಯೆಯನ್ನು ತಾನೇ ಹೇಗೆ ಬಗೆಹರಿಸಿಕೊಳ್ಳಬಹುದು‌ ಎಂಬುದನ್ನು ಕೂಡ ಈ ಚಿತ್ರದಲ್ಲಿ ತೋರಿಸಿದ್ದೇವೆ. ಹೆಣ್ಣು ಲಕ್ಷ್ಮೀ ಸ್ವರೂಪಳು ಹೌದು. ಕಾಳಿ ಸ್ವರೂಪಳು ಹೌದು. ನಿರ್ದೇಶಕ ಬಾಲು ನಾರಾಯಣನ್ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿಶೀಲಾ ಚಿತ್ರವನ್ನು ಕೇರಳ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ, ಎರಡೂ ಕಡೆಯೂ ತಂತ್ರಜ್ಞರು ಕೊಡುಗೆ ನೀಡಿದ್ದಾರೆ. ರಾಗಿಣಿ ದ್ವಿವೇದಿ ಜೊತೆಗೆ ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರಿದ್ದಾರೆ.