ರಿಷಬ್ ಶೆಟ್ಟಿ ನಟನೆಯ 'ಹರಿಕಥೆ ಅಲ್ಲ ಗಿರಿಕಥೆ'ಯಲ್ಲಿ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್! ಹರಿಕಥೆ ಅಲ್ಲ ಗಿರಿಕಥೆ ಹಾಸ್ಯ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ಸಂದೇಶ್ ಪ್ರೊಡಕ್ಷನ್‌ನಿಂದ ನಿರ್ಮಿಸಲ್ಪಟ್ಟ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಅವರ ನಿರ್ದೇಶನದ ಸಿನಿಮಾ ಜೂನ್ 23 ರಂದು ರಿಲೀಸ್ ಆಗಲಿದೆ. ಹರಿಕಥೆ ಅಲ್ಲ ಗಿರಿಕಥೆ ಹಾಸ್ಯ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ.ಸಂದೇಶ್ ಪ್ರೊಡಕ್ಷನ್‌ನಿಂದ ನಿರ್ಮಿಸಲ್ಪಟ್ಟ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಅವರ ನಿರ್ದೇಶನದ ಸಿನಿಮಾ ಜೂನ್ 23 ರಂದು ರಿಲೀಸ್ ಆಗಲಿದೆ. ತಪಸ್ವಿನಿಗೆ ಆಕಸ್ಮಿಕವಾಗಿ ಸಿಕ್ಕ ಅವಕಾಶವಾಗಿದೆ, ವಿದ್ಯಾಭ್ಯಾಸ ಪೂರ್ಣಗೊಳಿಸಿದ ಕೂಡಲೇ ಸ್ಯಾಂಡಲ್ ವುಡ್ ಕೈ ಬೀಸಿ ಕರೆದಿದೆ.ನಟನೆಯಲ್ಲಿ ಯಾವುದೇ ಅನುಭವ ಅಥವಾ ತರಬೇತಿ ಇಲ್ಲದವರಿಗೆ ರಿಷಬ್ ಶೆಟ್ಟಿ ಅವರ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿರುವುದು ಒಂದು ವರದಾನ’ ಎಂದು ಕುಶಿ ಜೋಕುಮಾರಸ್ವಾಮಿ ಎಂಬ ಪಾತ್ರದಲ್ಲಿ ನಟಿಸಿರುವ ತಪಸ್ವಿನಿ ಅಭಿಪ್ರಾಯ ಪಟ್ಟಿದ್ದಾರೆ. ಹರಿಕಥೆಯಲ್ಲ ಗಿರಿಕಥೆ ಮೂಲಕ ತಪಸ್ವಿನಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಸಿನಿಮಾದಲ್ಲಿ ಸಿಕ್ಕ ಅನುಭವದಿಂದ ನಾನು ಖುಷಿಗೊಂಡದ್ದೇನೆ, ನನಗೆ ಮತ್ತಷ್ಟು ಉತ್ಸಾಹ ದೊರೆತಿದೆ. ಈಗ ನಾನು ನಟನಾ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಹಾಸ್ಯ ಸಿನಿಮಾಗಳಿಗೆ ಸಂಗೀತ ನೀಡುವುದು ಕಷ್ಟ: ವಾಸುಕಿ ವೈಭವ್ಲವ್ ಮಾಕ್‌ಟೇಲ್‌ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರಚನಾ ಇಂದರ್, ಹರಿಕಥೆಯಲ್ಲ ಗಿರಿಕಥೆ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿಸಲು ಉತ್ಸುಕರಾಗಿದ್ದಾರೆ. “ನಾನು ಚಿತ್ರದ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೇನೆ ಏಕೆಂದರೆ ಅದರಲ್ಲಿ ಕಮರ್ಷಿಯಲ್ ಸಿನಿಮಾಗಳಿಗಿಂತ ಹಾಸ್ಯ ಚಿತ್ರದಲ್ಲಿನ ಪಾತ್ರ ವಿಭಿನ್ನವಾಗಿರುತ್ತದೆ ಎಂದು ರಚನಾ ಇಂದರ್ ತಿಳಿಸಿದ್ದಾರೆ. ನನ್ನದು ಗಿರಿಜಾ ಥಾಮಸ್ ಎಂಬ ಟಾಮ್ ಬಾಯ್ ಪಾತ್ರ. ಆಕೆಗೆ ನಾಯಕಿಯಾಗಬೇಕೆಂಬ ಹಂಬಲವಿದ್ದು, ಆ್ಯಕ್ಷನ್ ಚಿತ್ರಗಳನ್ನು ನೋಡಿ ಆನಂದಿಸುವ ಪಾತ್ರ ನನ್ನದಾಗಿದೆ ಎಂದು ರಚನಾ ಇಂದರ್ ತಿಳಿಸಿದ್ದಾರೆ.ಇದು ನನ್ನ ಮೊದಲ ಹಾಸ್ಯ ಸಿನಿಮವಾಗಿದೆ, ಇಂತಹ ತಂಡದ ಜೊತೆ ಕೆಲಸ ಮಾಡುವುದು ನನಗೆ ಖುಷಿ ತಂದುಕೊಟ್ಟಿದೆ ಎಂದು ರಚನಾ ಹೇಳಿದ್ದಾರೆ.ಇದನ್ನೂ ಓದಿ: ಆಗಾಗ ನೆನಪಾಗುವ ವಾಸುಕಿ ಸಂಗೀತ ವೈಭವಹೊಸಬಳಾದ ನನಗೆ ಈಗಲೂ ಡೈಲಾಗ್ ಡೆಲಿವರಿ ಮಾಡಲು ಹಿಂಜರಿಕೆಯಾಗುತ್ತದೆ. ಆದಾಗ್ಯೂ, ರಿಷಬ್ ಮತ್ತು ತಂಡ ನನಗೆ ಆ ಕಂಫರ್ಟ್ ಝೋನ್ ಮತ್ತು ಆತ್ಮವಿಶ್ವಾಸವನ್ನು ನೀಡಿತು ಎಂದು ರಚನಾ ತಿಳಿಸಿದ್ದಾರೆ. ಗಣೇಶ್ ಅವರ ಟ್ರಿಬಲ್ ರೈಡಿಂಗ್ ಮತ್ತು ನಿರ್ದೇಶಕ ಶಶಾಂಕ್ ಅವರ ಲವ್ 360 ಸಿನಿಮಾದಲ್ಲಿಯೂ ರಚನಾ ನಟಿಸುತ್ತಿದ್ದಾರೆ.