ಚೆನ್ನೈ: ನಟಿ ಪಾಲಿನ್ ಜೆಸ್ಸಿಕಾ ಶವವಾಗಿ ಪತ್ತೆ; ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ? ತಮಿಳು ನಟಿ ದೀಪಾ ಆಕಾ ಪಾಲಿನ್ ಜೆಸ್ಸಿಕಾ,(29) ಭಾನುವಾರ ಚೆನ್ನೈನ ವೀರುಗಾಂಬಿಕಾಂ ನಗರದಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಚೆನ್ನೈ: ತಮಿಳು ನಟಿ ದೀಪಾ ಆಕಾ ಪಾಲಿನ್ ಜೆಸ್ಸಿಕಾ,(29) ಭಾನುವಾರ ಚೆನ್ನೈನ ವೀರುಗಾಂಬಿಕಾಂ ನಗರದಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ. ದೀಪಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ದೀಪಾ ಅವರು ನಾಸಿರ್ ಮುಖ್ಯಪಾತ್ರದಲ್ಲಿದ್ದ ‘ವೈದಾ‘ ಸಿನಿಮಾದಲ್ಲಿ ನಾಯಕಿಯಾಗಿದ್ದರು. ‘ಥುಪ್ಪಾರುವಿಲನ್‘ ಸೇರಿದಂತೆ ಕೆಲ ಚಿತ್ರಗಳಲ್ಲಿ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ್ದರು.ವಿರುಗಂಬಾಕ್ಕಂನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ದೀಪಾ ಏಕಾಂಗಿಯಾಗಿ ವಾಸಿಸುತ್ದಿದ್ದರು ಎನ್ನಲಾಗಿದೆ. ಇಂದು ಮಧ್ಯಾಹ್ನ ತಮ್ಮ ಕೋಣೆಯಲ್ಲಿ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮನೆಯವರು ಆಕೆ ಮೊಬೈಲ್‌ಗೆ ಕರೆ ಮಾಡಿದ್ದಾರೆ. ನಿತಂತರವಾಗಿ ಕರೆ ಮಾಡಿದ್ರೂ ಸ್ವೀಕರಿಸದೇ ಇದ್ದುದ್ದರಿಂದ ಮನೆಯವರು ಗಾಬರಿಗೊಂಡಿದ್ದಾರೆ. ಬಳಿಕ ಸ್ನೇಹಿತೆಗೆ ವಿಚಾರ ತಿಳಿಸಿದ್ದು, ಆಕೆ ದೀಪಾ ಇರುವ ಫ್ಲಾಟ್‌ಗೆ ಹೋಗಿ ನೋಡಿದ್ದಾರೆ. ಈ ವೇಳೆ ಕೋಣೆಯಲ್ಲಿ ದೀಪಾ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.ನಟಿ ದೀಪಾ ಹಲವು ವರ್ಷಗಳಿಂದ ಮನೆಯವರಿಂದ ದೂರವಿದ್ದು, ಒಬ್ಬರೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಅಲ್ಲದೇ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರವೂ ಬಹುದು ಅಂತ ಶಂಕಿಸಲಾಗಿದೆ.