ಮೇಘನಾ ರಾಜ್ ನಟನೆಯ ತತ್ಸಮ-ತದ್ಭವ ಒಟಿಟಿಯಲ್ಲಿ ರಿಲೀಸ್ ಮೇಘನಾ ರಾಜ್ ಸರ್ಜಾ ನಟನೆಯ ಪನ್ನಗಾಭರಣ ನಿರ್ದೇಶನದ ತತ್ಸಮ-ತದ್ಭವ ಈಗ ಪ್ರೈಮ್ ವೀಡಿಯೊದಲ್ಲಿ ವೀಕ್ಷಣೆಗೆ ಲಭ್ಯವಿದೆ. ತತ್ಸಮ ತದ್ಭವ ಸಿನಿಮಾವನ್ನು ವಿಶಾಲ್ ಆತ್ರೇಯ ಬರೆದು ನಿರ್ದೇಶಿಸಿದ್ದಾರೆ. ಮೇಘನಾ ರಾಜ್ ಸರ್ಜಾ ನಟನೆಯ ಪನ್ನಗಾಭರಣ ನಿರ್ದೇಶನದ ತತ್ಸಮ-ತದ್ಭವ ಈಗ ಪ್ರೈಮ್ ವೀಡಿಯೊದಲ್ಲಿ ವೀಕ್ಷಣೆಗೆ ಲಭ್ಯವಿದೆ. ತತ್ಸಮ ತದ್ಭವ ಸಿನಿಮಾವನ್ನು ವಿಶಾಲ್ ಆತ್ರೇಯ ಬರೆದು ನಿರ್ದೇಶಿಸಿದ್ದಾರೆ.ಪನ್ನಗಾಭರಣ, ಸ್ಪೂರ್ತಿ ಅನಿಲ್ ಮತ್ತು ಚೇತನ್ ನಂಜುಂಡಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಅರವಿಂದ್ ಅಯ್ಯರ್, ಬಾಲಾಜಿ ಮನೋಹರ್, ಟಿಎಸ್ ನಾಗಾಭರಣ, ರಾಜಶ್ರೀ ಪೊನ್ನಪ್ಪ ಮತ್ತು ಮಹತಿ ವೈಷ್ಣವಿ ಭಟ್ ಸೇರಿದಂತೆ ಇತರರು ಇದ್ದಾರೆ.ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಅಭಿನಯದ 'ಕೌಸಲ್ಯಾ ಸುಪ್ರಜಾ ರಾಮ' ಒಟಿಟಿಯಲ್ಲಿ ಬಿಡುಗಡೆ!ಕೆಆರ್‌ಜಿ ಸ್ಟುಡಿಯೋಸ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ತತ್ಸಮ ತದ್ಭವ ಸೆಪ್ಟೆಂಬರ್ 15 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕ ಶ್ರೀನಿವಾಸ್ ರಾಮಯ್ಯ ಅವರ ಮೇಲ್ವಿಚಾರಣೆಯಲ್ಲಿ ಆಕರ್ಷಣೀಯ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.