ಕನ್ನಡದ ನಿರ್ದೇಶಕ ಕಿರಣ್ ಗೋವಿ ಹೃದಯಾಘಾತದಿಂದ ನಿಧನ ಕನ್ನಡದ ನಿರ್ದೇಶಕ ಕಿರಣ್ ಗೋವಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡದ ನಿರ್ದೇಶಕ ಕಿರಣ್ ಗೋವಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 50 ವರ್ಷ ಕಿರಣ್ ಗೋವಿಗೆ ಅವರಿಗೆ ಕಚೇರಿಯಲ್ಲಿದ್ದಾಗ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಿರಣ್ ಗೋವಿ ಅವರು ಪಯಣ, ಸಂಚಾರಿ, ಯಾರಿಗುಂಟು-ಯಾರಿಗಿಲ್ಲ, ಪಾರು / ದೇವದಾಸ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಿರಣ್ ಗೋವಿ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.