ತಮಿಳು ಹಾಸ್ಯನಟ ವಡಿವೇಲು ಆಸ್ಪತ್ರೆಗೆ ದಾಖಲು: ಒಮಿಕ್ರಾನ್ ಸೋಂಕು ಶಂಕೆ ವಡಿವೇಲು ಅವರು ಇತ್ತೀಚಿಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ತಮಿಳು ಸಿನಿಮಾ 'ನಾಯ್ ಶೇಖರ್ ರಿಟರ್ನ್ಸ್' ಚಿತ್ರೀಕರಣಕ್ಕೆಂದು ಅವರು ಲಂಡನ್ನಿಗೆ ತೆರಳಿದ್ದರು. ಚೆನ್ನೈ: ತಮಿಳು ಹಾಸ್ಯ ನಟ ವಡಿವೇಲು ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಚೆನ್ನೈ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿ: ಕೋವಿಡ್-19: ತಮಿಳುನಾಡಿನಲ್ಲಿ ಒಂದೇ ದಿನ 33 ಮಂದಿಗೆ ಓಮೈಕ್ರಾನ್ ಪಾಸಿಟಿವ್ವಡಿವೇಲು ಅವರು ಇತ್ತೀಚಿಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರು ಎಂದು ತಿಳಿದುಬಂದಿದೆ. ತಮಿಳು ಸಿನಿಮಾ 'ನಾಯ್ ಶೇಖರ್ ರಿಟರ್ನ್ಸ್' ಚಿತ್ರೀಕರಣಕ್ಕೆಂದು ಅವರು ಲಂಡನ್ನಿಗೆ ತೆರಳಿದ್ದರು. ಇದನ್ನೂ ಓದಿ: ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆವಿದೇಶದಿಂದ ವಾಪಸ್ ಆದಾಗಲೇ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂದಿತ್ತು ಎಂದು ಮನೆಯವರಿಂದ ತಿಳಿದುಬಂದಿದೆ. ವಡಿವೇಲು ಅವರಿಗೆ ಒಮಿಕ್ರಾನ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: 'ತಮಿಳ್ ತಾಯ್ ವಾಳ್ತು' ನಾಡಗೀತೆಯಾಗಿ ಘೋಷಿಸಿದ ತಮಿಳುನಾಡು ಸರ್ಕಾರ