ಬಿಡುಗಡೆಗೂ ಮುನ್ನವೇ 'ಗುರು ಶಿಷ್ಯರು' ಭರ್ಜರಿ ಕಲೆಕ್ಷನ್ ಶರಣ್ ಅಭಿನಯದ ಗುರು ಶಿಷ್ಯರು ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಶರಣ್ ಅಭಿನಯದ ಗುರು ಶಿಷ್ಯರು ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಬಿಡುಗಡೆಗೂ ಮುನ್ನವೇ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಜಡೇಶಾ ಕೆ ಹಂಪಿ ನಿರ್ದೇಶನದ ಕ್ರೀಡಾ ಆಧಾರಿತ ಈ ಚಿತ್ರ ಸ್ಟಾರ್ ಮಕ್ಕಳು ಮತ್ತು ಇತರ ಮುಂಬರುವ ಪ್ರತಿಭೆಗಳನ್ನು ಒಳಗೊಂಡಿದೆ. ಚಿತ್ರದ ಆಡಿಯೋ, ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು ಉತ್ತಮ ಬೆಲೆಗೆ ಮಾರಾಟವಾಗಿವೆ ಮತ್ತು ವಿವಿಧ ವಿತರಕರಿಂದ ಬೇಡಿಕೆ ಸೃಷ್ಟಿಸಿದೆ.“ನಿರ್ಮಾಪಕ ಜಗದೀಶ್ ಗೌಡ, ಬೆಂಗಳೂರು, ಕೋಲಾರ ಮತ್ತು ತುಮಕೂರು ಪ್ರದೇಶಗಳಲ್ಲಿ ಚಿತ್ರದ ವಿತರಣೆಯ ಹಕ್ಕು ಪಡೆದಿದ್ದಾರೆ. ಜಯಣ್ಣ ಫಿಲಂಸ್ ಮೈಸೂರು, ಮಂಡ್ಯ, ಮಡಿಕೇರಿ ಮತ್ತು ಹಾಸನದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದೆ.ಇದನ್ನು ಓದಿ: ಗುರು ಶಿಷ್ಯರು ಟ್ರೈಲರ್ ಬಿಡುಗಡೆ; ಸಿನಿಮಾದಲ್ಲಿ ದೇಸೀ ಕ್ರೀಡೆ ಕ್ರೀಡೆ ಖೋ-ಖೋ ಖದರ್ಶಿವಾನಂದ್ ಚುಕ್ಕಿ ಮತ್ತು ಬಸವರಾಜ್ ಅವರು ಉತ್ತರ ಕರ್ನಾಟಕ ಪ್ರದೇಶವನ್ನು ನೋಡಿಕೊಳ್ಳುತ್ತಿದ್ದು, ಚಂದ್ರಪ್ಪ ಶಿವಮೊಗ್ಗ ಅವರು ಸೌತ್ ಕೆನರಾ ಪ್ರದೇಶಗಳಲ್ಲಿ ಚಿತ್ರವನ್ನು ವಿತರಿಸಲಿದ್ದಾರೆ ಎಂದು ಚಿತ್ರದ ಕ್ರಿಯೇಟಿವ್ ಹೆಡ್ ತರುಣ್ ಕಿಶೋರ್ ಸುಧೀರ್ ತಿಳಿಸಿದ್ದಾರೆ.ಚಿತ್ರದ ಮೂರನೇ ಹಾಡು ಮತ್ತು ಪ್ರೇರಕ ಹಾಡನ್ನು ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಲಿದೆ. ನಿರ್ಮಾಪಕರು ಕರ್ನಾಟಕದಾದ್ಯಂತ 200 ಪ್ಲಸ್ ಥಿಯೇಟರ್‌ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ತರುಣ್ ಹೇಳಿದ್ದಾರೆ.