ಸಾಲು ಸಾಲು ಚಿತ್ರಗಳಲ್ಲಿ ನ್ಯಾಷನಲ್ ಕ್ರಶ್; ಹೊಸ ಸಿನಿಮಾ 'ದಿ ಗರ್ಲ್‌ಫ್ರೆಂಡ್'ನಲ್ಲಿ ರಶ್ಮಿಕಾ ಮಂದಣ್ಣ ನಟನೆ! ನಟಿ ರಶ್ಮಿಕಾ ಮಂದಣ್ಣ ಅವರು ಗೀತಾ ಆರ್ಟ್ಸ್‌‌ನ ನಿರ್ಮಾಪಕ ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸಲಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ. ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅವರು ಗೀತಾ ಆರ್ಟ್ಸ್‌‌ನ ನಿರ್ಮಾಪಕ ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸಲಿರುವ 'ದಿ ಗರ್ಲ್‌ಫ್ರೆಂಡ್' ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.'ಚಿ ಲಾ ಸೌ' ಮತ್ತು 'ಮನ್ಮಧುಡು 2'ನಂತಹ ಚಿತ್ರಗಳಿಗೆ ಹೆಸರುವಾಸಿಯಾದ ರಾಹುಲ್ ರವೀಂದ್ರನ್ ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ.ಗೀತಾ ಆರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಚಿತ್ರದ ಫಸ್ಟ್ ಲುಕ್ ಜೊತೆಗೆ ಚಿತ್ರದ ಘೋಷಣೆ ಮಾಡಿದೆ. ' .51 #