ಆಗಸ್ಟ್ 24ಕ್ಕೆ ನಟಿ ಹರ್ಷಿಕಾ- ಭುವನ್ ಪೊನ್ನಣ್ಣ ವಿವಾಹ ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ನಟ ಭುವನ್ ಪೊನ್ನಣ್ಣ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ವಿವಾಹವಾಗುತ್ತಿದ್ದಾರೆ. ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ನಟ ಭುವನ್ ಪೊನ್ನಣ್ಣ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ವಿವಾಹವಾಗುತ್ತಿದ್ದಾರೆ.ಮೊನ್ನೆಯಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಲಗ್ನಪತ್ರಿಕೆ ಕಾರ್ಯ ಸರಳವಾಗಿ ನಡೆದಿದೆ. ಎರಡೂ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಯಲ್ಲಿ ಈ ಜೋಡಿಯ ಆತ್ಮೀಯರು, ಸಿನಿಮಾ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.ಮದುವೆ ಆಮಂತ್ರಣ ಪತ್ರಿಕೆ ಕೂಡ ಸಿದ್ಧವಾಗಿದ್ದು, ಕೊಡಗು ಭಾಷೆಯಲ್ಲೇ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕೊಡಗು ಸಂಪ್ರದಾಯದಂತೆಯೇ ಇಬ್ಬರೂ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲೇ ನಡೆಯಲಿವೆ. ಭುವನ್ ಮತ್ತು ಹರ್ಷಿಕಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಒಟ್ಟಿಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಿದ್ದರು.ಇದನ್ನೂ ಓದಿ: ವಿಜಯ ರಾಘವೇಂದ್ರ, ಹರ್ಷಿಕಾ ಪೂಣಚ್ಚ ನಟನೆಯ ‘ಕಾಸಿನಸರ‌‘ ಸಿನಿಮಾ ಮಾರ್ಚ್‌ 3ಕ್ಕೆ ಬಿಡುಗಡೆಹರ್ಷಿಕಾ ಪೂಣಚ್ಚ, ಮುಗ್ಧ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ. ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನ ತಾವೂ ತೊಡಗಿಸಿಕೊಂಡು, ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಕಷ್ಟದಲ್ಲಿದ್ದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವ ಮೂಲಕ ಅದ್ಭುತ ಕೆಲಸ ಮಾಡಿದ್ದಾರೆ.