ಸ್ಟಾರ್ ನಟನ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್: 'ಉತ್ತರಕಾಂಡ’ದಲ್ಲಿ ಡಾಲಿ ಜೊತೆ ರೊಮ್ಯಾನ್ಸ್ ? ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದ ಮೂಲಕ ರಮ್ಯಾ ಬಣ್ಣದ ಪ್ರಪಂಚಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಸುದ್ದಿ ಅಧಿಕೃತವಾಗಲಿದೆ ಎಂದೂ ಹೇಳಲಾಗುತ್ತಿದೆ. ಬೆಂಗಳೂರು: ಅಂದುಕೊಂಡಂತೆ ಆಗಿದ್ದರೆ, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ತಮ್ಮದೇ ನಿರ್ಮಾಣದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಬೇಕಿತ್ತು. ಆದರೆ, ಬೇರೊಬ್ಬ ನಾಯಕಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.ಇದೀಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದ ಮೂಲಕ ರಮ್ಯಾ ಬಣ್ಣದ ಪ್ರಪಂಚಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾಹಿತಿ ಇದೆ. ಸದ್ಯದಲ್ಲೇ ಈ ಸುದ್ದಿ ಅಧಿಕೃತವಾಗಲಿದೆ ಎಂದೂ ಹೇಳಲಾಗುತ್ತಿದೆ.ಸಿನಿಪ್ರಿಯರು ಕಂಡುಕೊಂಡಂತೆ “ಉತ್ತರಕಾಂಡ’ ಚಿತ್ರದ ಮೂಲಕ ನಟಿ ರಮ್ಯಾ ನಾಯಕಿಯಾಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರಂತೆ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ ಮೂಲಕ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದರೆ ಒಳ್ಳೆಯದು ಎಂಬ ಆಪ್ತರ ಸಲಹೆ ಮೇರೆಗೆ ರಮ್ಯಾ “ಸ್ವಾತಿ ಮುತ್ತಿ’ನಿಂದ ಹೊರಬಂದಿದ್ದಾರೆಂಬ ಮಾತೂ ಕೇಳಿಬರುತ್ತಿದೆ. ಜೊತೆಗೆ “ಉತ್ತರಕಾಂಡ’ ಚಿತ್ರಕ್ಕಾಗಿ ರಮ್ಯಾ ಸಖತ್‌ ಸ್ಲಿಮ್‌ ಕೂಡಾ ಆಗುತ್ತಿದ್ದಾರಂತೆ.ವಿಜಯ್ ಕಿರಗಂದೂರು ಅವರು ಪ್ರಸ್ತುತ ಪಡಿಸುತ್ತಿರುವ ಚಿತ್ರ ಉತ್ತರಕಾಂಡ ವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್ ಅವರು ನಿರ್ಮಿಸುತ್ತಿದ್ದಾರೆ. ಡಾಲಿ ಧನಂಜಯ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ.