'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ: ರಜನಿಕಾಂತ್ ಸ್ಪಷ್ಟನೆ 'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದು, ಮಗಳು ಐಶ್ವರ್ಯಾ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಚೆನ್ನೈ: 'ಸಂಘಿ' ಎಂದರೆ ಕೆಟ್ಟ ಪದ ಎಂದು ಮಗಳು ಹೇಳಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದು, ಮಗಳು ಐಶ್ವರ್ಯಾ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.ಈ ಹಿಂದೆ 'ಲಾಲ್ ಸಲಾಂ' ಚಿತ್ರದ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ್ದ ಐಶ್ವರ್ಯಾ ರಜನಿಕಾಂತ್, ನನ್ನ ತಂದೆಯನ್ನು ಸಂಘಿ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆದರೆ ಅವರು ಸಂಘಿಯಲ್ಲ. ಅಪ್ಪ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಆಧ್ಯಾತ್ಮಿಕ ವ್ಯಕ್ತಿ ಮತ್ತು ಹೀಗಿರುವಾಗ ತಂದೆಯನ್ನು ಏಕೆ (ಸಂಘಿ ಎಂದು) ವಿವರಿಸಬೇಕು ಎಂದು ಭಾವನಾತ್ಮಕವಾಗಿ ಹೇಳಿದ್ದರು. ಇದನ್ನೂ ಓದಿ: ರಜನಿಕಾಂತ್ ಸಂಘಿ ಅಲ್ಲ: ತಂದೆಯನ್ನು ಸಮರ್ಥಿಸಿಕೊಂಡ ಪುತ್ರಿ ಐಶ್ವರ್ಯಾ!ಆದರೆ ಅವರ ಹೇಳಿಕೆಯನ್ನು ಮತ್ತೆ ಕೆಲವರು ಟೀಕೆ ಮಾಡಿ ಸಂಘಿ ಎಂಬುದು ಕೆಟ್ಟಪದವೇ ಎಂದು ಕಿಡಿಕಾರಿದ್ದರು. ಈ ಟೀಕೆಗಳಿಗೆ ಇದೀಗ ಸ್ವತಃ ರಜನಿಕಾಂತ್ ಸ್ಪಷ್ಟನೆ ನೀಡಿದ್ದು, 'ತಮ್ಮ ಪುತ್ರಿ ಐಶ್ವರ್ಯಾ 'ಸಂಘಿ' ಅನ್ನು 'ಕೆಟ್ಟ ಪದ' ಎಂದು ಹೇಳಿಲ್ಲ. ಆಧ್ಯಾತ್ಮಿಕ ವ್ಯಕ್ತಿ ಎಂದು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.'ಸಂಘಿ' ಎಂಬುದು ಬಲಪಂಥೀಯ ಬೆಂಬಲಿಗ ಅಥವಾ ಕಾರ್ಯಕರ್ತನನ್ನು ವಿವರಿಸಲು ಬಳಸುವ ಆಡುಮಾತಿನ ಪದವಾಗಿದೆ. ಅಂದಹಾಗೆ ಲಾಲ್ ಸಲಾಂ ಚಿತ್ರವು ಐಶ್ವರ್ಯಾ ನಿರ್ದೇಶನದ ಚಿತ್ರವಾಗಿದ್ದು, ಇದೇ ಫೆಬ್ರವರಿ 9 ರಂದು ಬಿಡುಗಡೆಯಾಗಲಿದೆ.