ಸುಧೀರ್ ಅತ್ತಾವರ್ ನಿರ್ದೇಶನದ 'ಕರಿ ಹೈದ ಕರಿ ಅಜ್ಜ' ಸಿನಿಮಾದಲ್ಲಿ ನೃತ್ಯ ನಿರ್ದೇಶಕ ಸಂದೀಪ್ ಸೋಪರ್ಕರ್ ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಕುರಿತು ಸುಧೀರ್ ಅತ್ತಾವರ್ ನಿರ್ದೇಶನದ ತಯಾರಾಗುತ್ತಿರುವ 'ಕರಿ ಹೈದ ಕರಿ ಅಜ್ಜ' ಸಿನಿಮಾದಲ್ಲಿ ಭರತ್ ಸೂರ್ಯ, ಭವ್ಯ, ಶ್ರುತಿ ಮತ್ತು ಜನಪ್ರಿಯ ಹಿಂದಿ ನಟ ಕಬೀರ್ ಬೇಡಿ ನಟಿಸುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾಕ್ಕೆ ಹಾಲಿವುಡ್ ಮತ್ತು ಬಾಲಿವುಡ್ ನ ಪ್ರಸಿದ್ಧ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಸೇರಿದ್ದಾರೆ. ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಕುರಿತು ಸುಧೀರ್ ಅತ್ತಾವರ್ ನಿರ್ದೇಶನದ ತಯಾರಾಗುತ್ತಿರುವ 'ಕರಿ ಹೈದ ಕರಿ ಅಜ್ಜ' ಸಿನಿಮಾದಲ್ಲಿ ಭರತ್ ಸೂರ್ಯ, ಭವ್ಯ, ಶ್ರುತಿ ಮತ್ತು ಜನಪ್ರಿಯ ಹಿಂದಿ ನಟ ಕಬೀರ್ ಬೇಡಿ ನಟಿಸುತ್ತಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾಕ್ಕೆ ಹಾಲಿವುಡ್ ಮತ್ತು ಬಾಲಿವುಡ್ ನ ಪ್ರಸಿದ್ಧ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಸೇರಿದ್ದಾರೆ. ಈ ಸಿನಿಮಾದೊಂದಿಗೆ ನೃತ್ಯ ಸಂಯೋಜಕ ಹಾಗೂ ಹಾಲಿವುಡ್, ಬಾಲಿವುಡ್ ಮತ್ತು ಫ್ರೆಂಚ್ ಚಲನಚಿತ್ರಗಳಲ್ಲಿ ನಟಿಸಿರುವ ನಟ ಸಂದೀಪ್ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂದೀಪ್ ಗುಳಿಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ದೇವಂತೆ ಪೂಜಿಸುವ 12 ನೇ ಶತಮಾನದ ಆದಿವಾಸಿ ಕೊರಗಜ್ಜನ ಜೀವನಾಧಾರಿತ ಚಿತ್ರವಾಗಿದೆ. ಕರಿ ಹೈದ ಕರಿ ಅಜ್ಜ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ತ್ರಿವಿಕ್ರಮ್ ಸಪಲಯ್ಯ ಅವರ ಬೆಂಬಲದೊಂದಿಗೆ, ಚಿತ್ರಕ್ಕೆ ಸುಧೀರ್ ಮತ್ತು ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ ಮತ್ತು ಪವನ್ ಮತ್ತು ಗಣೇಶ್ ಕೆಳಮನೆ ಅವರ ಛಾಯಾಗ್ರಹಣವಿರಲಿದೆ. ಬಾಂಬೆ ಮತ್ತು ದಿಲ್ ಸೆಯಂತಹ ಚಿತ್ರಗಳ ಸಂಕಲನಕಾರ ಸುರೇಶ್ ಅರಸ್ ಅವರ ಸಂಕಲನವಿದೆ.