ನಟಿ ಅದಿತಿ ಪ್ರಭುದೇವ ಆರತಕ್ಷತೆಯಲ್ಲಿ ಲಹರಿ ವೇಲು ಅಸ್ವಸ್ಥ; ಆಸ್ಪತ್ರೆಗೆ ದಾಖಲು ನಟಿ ಅದಿತಿ ಪ್ರಭುದೇವ ಅವರ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಲಹರಿ ಆಡಿಯೋ ಮುಖ್ಯಸ್ಥ ಲಹರಿ ವೇಲು ಅವರು ಅಸ್ವಸ್ಥಗೊಂಡಿದ್ದಾರೆ. ಬೆಂಗಳೂರು: ನಟಿ ಅದಿತಿ ಪ್ರಭುದೇವ ಅವರ ಆರತಕ್ಷತೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಲಹರಿ ಆಡಿಯೋ ಮುಖ್ಯಸ್ಥ ಲಹರಿ ವೇಲು ಅವರು ಅಸ್ವಸ್ಥಗೊಂಡಿದ್ದಾರೆ. ಉದ್ಯಮಿ ಯಶಸ್ ಜೊತೆ ನಾಳೆ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಆಗಮಿಸಿದ್ದಾಗ ಲಹರಿ ವೇಲು ಅವರು ಅಸ್ವಸ್ಥಗೊಂಡಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ತಿಳಿದುಬಂದಿದೆ.