ಕೆಜಿಎಫ್ 2, ಹಿಂದಿಕ್ಕಿ IMDbಯಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಕಾಂತಾರ! ಸ್ಟಾರ್ ನಿರ್ದೇಶಕರ ಎಸ್.ಎಸ್ ರಾಜಮೌಳಿ, ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನೂ ಹಿಂದಿಕ್ಕಿ ರಿಷಬ್ ಶೆಟ್ಟಿ ಮುನ್ನುಗ್ಗುತ್ತಿದ್ದಾರೆ. ಬೆಂಗಳೂರು: ಸ್ಟಾರ್ ನಿರ್ದೇಶಕರ ಎಸ್.ಎಸ್ ರಾಜಮೌಳಿ, ಭರವಸೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನೂ ಹಿಂದಿಕ್ಕಿ ರಿಷಬ್ ಶೆಟ್ಟಿ ಮುನ್ನುಗ್ಗುತ್ತಿದ್ದಾರೆ. ರಾಜಮೌಳಿಯವರ ಆರ್ ಆರ್ ಆರ್, ಪ್ರಶಾಂತ್ ನೀಲ್ ಅವರ ಕೆಜಿಎಫ್ 2 ಚಿತ್ರಕ್ಕಿಂತಲೂ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಿತ್ರ ಅತಿಹೆಚ್ಚು ರೇಟಿಂಗ್ ಪಡೆದಿದೆ.ನಿರ್ಮಾಪಕ-ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರವು ನಲ್ಲಿ 10 ರಲ್ಲಿ 9.5 ರೇಟಿಂಗ್‌ನೊಂದಿಗೆ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಮೂಲತಃ ಕನ್ನಡದಲ್ಲಿ ತಯಾರಾದ ಈ ಚಿತ್ರವು ಯಶ್ ಅವರ ಕೆಜಿಎಫ್ 2 (8.4/10) ಮತ್ತು ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ (8/10) ಅನ್ನು ಮೀರಿಸಿದೆ.ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸೆಪ್ಟೆಂಬರ್ 30ರಂದು ಬಿಡುಗಡೆಯಾಯಿತು. ಕನ್ನಡ ಚಲನಚಿತ್ರವು ಸಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು. ಈ ಚಿತ್ರ ಕರ್ನಾಟಕದಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಅದರ ಯಶಸ್ಸನ್ನು ನೋಡುತ್ತಿರುವ ಕಾಂತಾರ ನಿರ್ಮಾಪಕರು ಚಿತ್ರದ ಡಬ್ಬಿಂಗ್ ಆವೃತ್ತಿಯನ್ನು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.’ @shetty_rishab @ # !! ! @shetty_rishab !! ../ypZcsMLeChಚಿತ್ರದ ಹಿಂದಿ ಆವೃತ್ತಿಯು ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದರೆ, ತಮಿಳು ಮತ್ತು ತೆಲುಗು ಆವೃತ್ತಿಯು ಅಕ್ಟೋಬರ್ 15 ರಂದು ದೊಡ್ಡ ಪರದೆಯಲ್ಲಿ ಬರಲಿದೆ.ಇದನ್ನೂ ಓದಿ: ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರಕ್ಕೆ ನಟ ಧನುಷ್ ಮೆಚ್ಚುಗೆಯ ಸುರಿಮಳೆ!ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿಯೊಂದಿಗೆ, ಅಚ್ಯುತ್ ಕುಮಾರ್ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕೆಜಿಎಫ್ ಮತ್ತು ಕೆಜಿಎಫ್ 2 ನ ತಯಾರಕರಾದ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ.