ಆರ್ಕೆಸ್ಟ್ರಾ ಮೈಸೂರು ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್ ಸುನೀಲ್ ಮೈಸೂರು ನಿರ್ದೇಶನದ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಸಂಕ್ರಾಂತಿ ಹಬ್ಬಕ್ಕೂ ಮುನ್ನ ಜನವರಿ 12 ರಂದು ಬಿಡುಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸುನೀಲ್ ಮೈಸೂರು ನಿರ್ದೇಶನದ ಆರ್ಕೆಸ್ಟ್ರಾ ಮೈಸೂರು ಸಿನಿಮಾ ಸಂಕ್ರಾಂತಿ ಹಬ್ಬಕ್ಕೂ ಮುನ್ನ ಜನವರಿ 12 ರಂದು ಬಿಡುಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.ಚಿತ್ರಕ್ಕೆ ರಘು ದೀಕ್ಷಿತ್ ಪ್ರೊಡಕ್ಷನ್ಸ್ ಮತ್ತು ಅಶ್ವಿನ್ ವಿಜಯ್ ಕುಮಾರ್ ಬಂಡವಾಳ ಹೂಡಿದ್ದು, ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಮತ್ತು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅವರ ಕೆಆರ್‌ಜಿ ಸ್ಟುಡಿಯೋಸ್ ಬಿಡುಗಡೆ ಮಾಡಲಿದೆ.ಆರ್ಕೆಸ್ಟ್ರಾ ಮೈಸೂರಿನ ಮತ್ತೊಂದು ವಿಶೇಷವೆಂದರೆ ಎಂಟು ಹಾಡುಗಳನ್ನು ರಘು ದೀಕ್ಷಿತ್ ಸಂಯೋಜಿಸಿದ್ದಾರೆ ಮತ್ತು ಎಲ್ಲಾ ಹಾಡುಗಳಿಗೆ ನಟ ಧನಂಜಯ್ ಅವರೇ ಸಾಹಿತ್ಯವನ್ನು ಬರೆದಿದ್ದಾರೆ. ರಾಜಲಕ್ಷ್ಮಿ ನಾಯಕಿಯಾಗಿ ನಟಿಸಿರುವ ಚಿತ್ರದಲ್ಲಿ ಮಹೇಶ್ ಕುಮಾರ್, ರವಿ ಹುಣಸೂರು, ಸಚ್ಚು, ರಾಜೇಶ್ ಬಸವಣ್ಣ, ಲಿಂಗರಾಜು, ಮತ್ತು ಮಹದೇವ ಪ್ರಸಾದ್ ಮುಂತಾದವರು ನಟಿಸಿದ್ದಾರೆ.ಇದನ್ನೂ ಓದಿ: 'ಹಾಡಬೇಕೆಂಬ ಯುವಕನ ಮಹತ್ವಕಾಂಕ್ಷೆಯ ಕಥೆಯುಳ್ಳ ಸಿನಿಮಾವೇ ಆರ್ಕೆಸ್ಟ್ರಾ ಮೈಸೂರು'ಬಾದಲ್ ನಂಡುಂಡಸ್ವಾಮಿ ಕಲಾ ನಿರ್ದೇಶನವನ್ನು ವಹಿಸಿಕೊಂಡಿದ್ದು, ಜೋಸೆಫ್ ಕೆ ರಾಜಾ ಅಭಿನಯದ ಹೊರತಾಗಿ ಚಿತ್ರದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.