'ಕ್ಲಾಂತ' ಕೊರಗಜ್ಜನ ಪವಿತ್ರ ಅಂಶವನ್ನು ಪರಿಶೋಧಿಸುತ್ತದೆ: ನಿರ್ದೇಶಕ ವೈಭವ್ ಪ್ರಶಾಂತ್ ವೈಭವ್ ಪ್ರಶಾಂತ್ ನಿರ್ದೇಶನದ, ವಿಘ್ನೇಶ್ ಮತ್ತು ಸಂಗೀತಾ ಭಟ್ ಅಭಿನಯದ ಕ್ಲಾಂತ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರವು ಜನವರಿ 19ರಂದು ತೆರೆಗೆ ಬರುತ್ತಿದೆ. ವೈಭವ್ ಪ್ರಶಾಂತ್ ನಿರ್ದೇಶನದ, ವಿಘ್ನೇಶ್ ಮತ್ತು ಸಂಗೀತಾ ಭಟ್ ಅಭಿನಯದ ಕ್ಲಾಂತ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರವು ಜನವರಿ 19ರಂದು ತೆರೆಗೆ ಬರುತ್ತಿದೆ.ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ಚಿತ್ರತಂಡ ನಿನ್ನೆಯಷ್ಟೇ ಚಿತ್ರದ ಟ್ರೇಲರ್'ನ್ನು ಬಿಡುಗಡೆಗೊಳಿಸಿದೆ.ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಪ್ರಶಾಂತ್, ಕೋವಿಡ್ ಸಂದರ್ಭದಲ್ಲಿ ಕಥೆ ಬರೆಯಲಾಗಿತ್ತು. ಆರಂಭದಲ್ಲಿ ತುಳು ಸಂಸ್ಕೃತಿಯ ಆರಾಧನಾ ದೈವ ಕೊರಗಜ್ಜನನ್ನು ಸಿನಿಮಾದಲ್ಲಿ ತೋರಿಸುವ ಗುರಿ ಇತ್ತು. ಆದರೆ, ಈಗಾಗಲೇ ಕಾಂತಾರ ಚಿತ್ರ ಮಾಡಲಾಗಿದೆ. ಹೀಗಾಗಿ ಕೊರಗಜ್ಜನ ಪವಿತ್ರ ಅಂಶಗಳನ್ನ ಪರಿಶೋಧಿಸುವ ಕೆಲಸವನ್ನು ಈ ಚಿತ್ರದಲ್ಲಿ ಮಾಡಲಾಗಿದೆ ಎಂದು ಹೇಳಿದರು.ಚಿತ್ರವು ತನ್ನದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿದ. ಸಸ್ಪೆನ್ಸ್‌ಫುಲ್ ಆಕ್ಷನ್ ಥ್ರಿಲ್ಲರ್‌ ಚಿತ್ರ ಇದಾಗಿದೆ. ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇನೆ. ನನಗೊಂದು ಸಕ್ಸಸ್ ಚಿತ್ರ ಅಗತ್ಯವಿದೆ. ಈ ಚಿತ್ರ ಯಶಸ್ವಿಯಾಗುವ ವಿಶ್ವಾಸವಿದೆ. ಚಿತ್ರದಲ್ಲಿ ಪ್ರದೀಪ್ ಮತ್ತು ಸುದೀಪ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆಂದು ತಿಳಿಸಿದರು.ಇದನ್ನೂ ಓದಿ: ಕ್ಲಾಂತ ಸಿನಿಮಾದ ಟೀಸರ್ ಬಿಡುಗಡೆ; ಚಿತ್ರರಂಗದ ಹೊಸ ಸವಾಲುಗಳ ಬಗ್ಗೆ ನಟಿ ಸಂಗೀತಾ ಭಟ್ ಮಾತುಇತ್ತೀಚೆಗಷ್ಟೇ ರಾಜೇಶ್ ಕೃಷ್ಣನ್ ಹಾಡಿರುವ ಕೊರಗಜ್ಜ ಕುರಿತ ಹಾಡನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ಚಿತ್ರದಲ್ಲಿ ಖ್ಯಾತ ತುಳು ರಂಗ ಕಲಾವಿದ ಭೋಜರಾಜ್ ವಾಮಂಜೂರ್ ಅವರ ಪುತ್ರಿ ಪಂಚಮಿ ವಾಮಂಜೂರ್, ವೀಣಾ ಸುಂದರ್, ದೀಪಿಕಾ, ಪ್ರವೀಣ್ ಜೈನ್, ಯುವಾ ಮತ್ತು ಸ್ವಪ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಚಿತ್ರವನ್ನು ಉದಯ ಅಮ್ಮಣ್ಣಾಯ .ಕೆ ನಿರ್ಮಾಣ ಮಾಡಿದ್ದು, ಇವರೊಟ್ಟಿಗೆ ಅರುಣ್ ಕುಮಾರ್, ಪ್ರದೀಪ್ ಗೌಡ, ಹೇಮಂತ್ ರೈ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಚಿತ್ರಕ್ಕೆ ಎಪಿ ಚಂದ್ರಕಾಂತ್ ಅವರ ಸಂಗೀತ, ಮೋಹನ್ ಲೋಕನಾಥನ್ ಅವರ ಛಾಯಾಗ್ರಹಣ ಮತ್ತು ಪಿಆರ್ ಸೌಂದರ್ ರಾಜ್ ಅವರ ಸಂಕಲನವಿದೆ.