ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ 'ಪಂಚತಂತ್ರ' ನಾಯಕ ವಿಹಾನ್ ಗೆ ಜೋಡಿಯಾಗಿದ್ದಾರೆ 'ನಮ್ಮನೆ ಯುವರಾಣಿ ' 777 ಚಾರ್ಲಿ ಚಿತ್ರದ ಯಶಸ್ಸಿನ ಸಂತಸದಲ್ಲಿರುವ ನಟ- ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಮತ್ತೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಪರಮ್ವ ಸ್ಟುಡಿಯೋಸ್ ಮೂಲಕ ಹೊಸಬರ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡುತ್ತಿದ್ದಾರೆ. 777 ಚಾರ್ಲಿ ಚಿತ್ರದ ಯಶಸ್ಸಿನ ಸಂತಸದಲ್ಲಿರುವ ನಟ- ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಮತ್ತೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಪರಮ್ವ ಸ್ಟುಡಿಯೋಸ್ ಮೂಲಕ ಹೊಸಬರ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಬಂಡವಾಳ ಹೂಡುತ್ತಿದ್ದಾರೆ.ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಕಡೆಯಿಂದ ಹೊಸ ಅಪ್ಡೇಟ್ ಹೊರಬಂದಿದೆ. ಪಂಚತಂತ್ರ' ಸಿನಿಮಾದಲ್ಲಿ ನಟಿಸಿದ ಬಳಿಕ ಬೇರೆ ಸಿನಿಮಾಗಳತ್ತ ವಿಹಾನ್ ಮುಖ ಮಾಡಿರಲಿಲ್ಲ. ಇದೀಗ ರೊಮ್ಯಾನ್ಸ್‌ ಡ್ರಾಮಾ ಶೈಲಿಯ ಕಥೆ ಇರುವ ಸಿನಿಮಾದ ಮೂಲಕ ಎಂಟ್ರಿ ನೀಡಿದ್ದಾರೆ .ರಕ್ಷಿತ್ ಶೆಟ್ಟಿ ನಿರ್ಮಾಣದ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವುದು ಖುಷಿ ತಂದಿದೆ, ಈ ಸಿನಿಮಾದಲ್ಲಿ ಕೆಲಸ ಮಾಡಲು ನನಗೆ ಸಡನ್ ಆಗಿ ಆಫರ್ ಬಂತು, ಉದ್ಯಮದಲ್ಲಿ ನನಗೆ ಗಾಡ್ ಫಾದರ್ ಇಲ್ಲ, ಆದರೆ ಪಂಚತಂತ್ರದಲ್ಲಿ ನನ್ನ ನಟನೆಯನ್ನು ಗುರುತಿಸಿ ನನ್ನನ್ನಿ ಆಯ್ಕೆ ಮಾಡಿರುವುದಕ್ಕೆ ನನು ಹೃದಯ ತುಂಬಿ ಬರುತ್ತಿದೆ ಎಂದು ವಿಹಾನ್ ಹೇಳಿದ್ದಾರೆ.ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಆಗಸ್ಟ್‌ ವೇಳೆಗೆ ಚಿತ್ರದ ಶೀರ್ಷಿಕೆ ಘೋಷಣೆ ಮಾಡಿಕೊಳ್ಳುವ ಮೂಲಕ ಸಿನಿಮಾ ಕೆಲಸಗಳಿಗೆ ಚಾಲನೆ ನೀಡಲಿದೆ. ಅದಾದ ಬಳಿಕ ಸೆಪ್ಟೆಂಬರ್‌ನಲ್ಲಿ ಚಿತ್ರದ ಶೂಟಿಂಗ್‌ ಶುರುಮಾಡುವುದು ತಂಡದ ಪ್ಲ್ಯಾನ್. ಈ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳೂ ಈಗಾಗಲೇ ಶುರುವಾಗಿವೆ. ಪ್ರಾಜೆಕ್ಟ್‌ನ ಕುರಿತು ಹೆಚ್ಚಿನ ವಿವರಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.‘777 ಚಾರ್ಲಿ’ ಚಿತ್ರದ ಗೆಲುವಿನ ಬಳಿಕ ಅವರು ಹೊಸ ಸಿನಿಮಾದ ನಿರ್ಮಾಣದತ್ತ ಗಮನ ಹರಿಸಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವವರು ಯಾರು ಎಂಬುದನ್ನು ರಕ್ಷಿತ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ವಿಹಾನ್ ಮತ್ತು ಅಂಕಿತಾ ಅಮರ್ ಅವರ ಪ್ರತ್ಯೇಕ ಪೋಸ್ಟರ್ಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.