ನಟ ಅರುಣ್ ವಿಜಯ್‌ ನಟನೆಯ ಸಿನಿಮಾದಲ್ಲಿ ಕೃತಿ ಶೆಟ್ಟಿ ಬದಲಿಗೆ ಕನ್ನಡತಿ ರೋಶನಿ ಪ್ರಕಾಶ್ ಬಾಲಾ ಅವರ ವನಂಗಾನ್ ಇತ್ತೀಚಿನ ದಿನಗಳಲ್ಲಿ ಪಾತ್ರಗಳಿಗೆ ನಟ-ನಟಿಯರ ಬದಲಾವಣೆಯನ್ನು ಮಾಡುತ್ತಲೇ ಇದೆ. ಮೂಲತಃ ಸೂರ್ಯ ನಾಯಕನಾಗಿ ನಟಿಸಬೇಕಿತ್ತು. ಆದರೆ, ಸೂರ್ಯ ಪ್ರಾಜೆಕ್ಟ್‌ನಿಂದ ನಿರ್ಗಮಿಸಿದ ನಂತರ ನಟ ಅರುಣ್ ವಿಜಯ್‌ಗೆ ತಂಡಕ್ಕೆ ಸೇರಿಕೊಂಡರು. ಈಗ ನಾಯಕಿಯಾಗಿ ನಟಿಸಬೇಕಿದ್ದ ಕೃತಿ ಶೆಟ್ಟಿ ಅವರನ್ನೂ ಬದಲಾಯಿಸಲಾಗಿದೆಯಂತೆ. ಬಾಲಾ ಅವರ ವನಂಗಾನ್ ಇತ್ತೀಚಿನ ದಿನಗಳಲ್ಲಿ ಪಾತ್ರಗಳಿಗೆ ನಟ-ನಟಿಯರ ಬದಲಾವಣೆಯನ್ನು ಮಾಡುತ್ತಲೇ ಇದೆ. ಮೂಲತಃ ಸೂರ್ಯ ನಾಯಕನಾಗಿ ನಟಿಸಬೇಕಿತ್ತು. ಆದರೆ, ಸೂರ್ಯ ಪ್ರಾಜೆಕ್ಟ್‌ನಿಂದ ನಿರ್ಗಮಿಸಿದ ನಂತರ ನಟ ಅರುಣ್ ವಿಜಯ್‌ಗೆ ತಂಡಕ್ಕೆ ಸೇರಿಕೊಂಡರು. ಈಗ ನಾಯಕಿಯಾಗಿ ನಟಿಸಬೇಕಿದ್ದ ಕೃತಿ ಶೆಟ್ಟಿ ಅವರನ್ನೂ ಬದಲಾಯಿಸಲಾಗಿದೆಯಂತೆ.ಮೂಲಗಳ ಪ್ರಕಾರ, ರೋಶನಿ ಪ್ರಕಾಶ್ ಈಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ನಟಿ ಈ ಹಿಂದೆ ತಮಿಳು ಚಿತ್ರಗಳಾದ ಯೆಮಾಲಿ (2018), ಜಡಾ (2019) ಹಾಗೂ ಕನ್ನಡದ ಕವಲುದಾರಿ (2019) ಮತ್ತು ಲಕ್ಕಿ ಮ್ಯಾನ್ (2022) ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವನಂಗಾನ್ ಚಿತ್ರದ ನಿರ್ಮಾಪಕರು ಶೀಘ್ರದಲ್ಲೇ ಚಿತ್ರದಲ್ಲಿ ರೋಶನಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತ ಹೇಳಿಕೆ ನೀಡುವ ನಿರೀಕ್ಷೆಯಿದೆ.ಇದನ್ನೂ ಓದಿ: ಅರ್ಥಗರ್ಭಿತ ಪಾತ್ರಗಳ ಭಾಗವಾಗಿರಲು ಬಯಸುತ್ತೇನೆ; ಕವಲುದಾರಿ ಸ್ಟಾರ್ ನಟಿ ರೋಶನಿ ಪ್ರಕಾಶ್ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಲಿದ್ದಾರೆ ಎಂಬುದು ಕನ್ಫರ್ಮ್ ಆಗಿದೆ. ಮಾರ್ಚ್ 9 ರಿಂದ ಹೊಸ ನಟರೊಂದಿಗೆ ಚಿತ್ರದ ಚಿತ್ರೀಕರಣವನ್ನು ನಿರ್ದೇಶಕ ಬಾಲಾ ಪುನರಾರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.