'ಪೆಪೆ' ನಿರ್ದೇಶಕ ಶ್ರೀಲೇಶ್ ನಾಯರ್ ಜೊತೆ ನೀನಾಸಂ ಸತೀಶ್ ಮುಂದಿನ ಸಿನಿಮಾ! ಪೆಪೆ ನಿರ್ದೇಶಕ ಶ್ರೀಲೇಶ್ ನಾಯರ್ ಜೊತೆ ನೀನಾಸಂ ಸತೀಶ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿದ್ದಾರೆ. ಪೆಪೆ ನಿರ್ದೇಶಕ ಶ್ರೀಲೇಶ್ ನಾಯರ್ ಜೊತೆ ನೀನಾಸಂ ಸತೀಶ್ ಮುಂದಿನ ಸಿನಿಮಾ ಮಾಡುತ್ತಿದ್ದಾರೆ, ಈ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿದ್ದಾರೆ.ಸದ್ಯ ಸತೀಶ್ ಅಶೋಕ ಬ್ಲೇಡ್, ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ಮೊದಲ ದ್ವಿಭಾಷಾ ಚಿತ್ರವಾಗಿದೆ, ಪೆಪೆ ನಿರ್ದೇಶಕ ಶ್ರೀಲೇಶ್ ನಾಯರ್ ಸಿನಿಮಾಗೆ ಸತೀಶ್ ಗ್ರೀನ್ ಸಿಗ್ನಲ್ ತೋರಿದ್ದಾರೆ.ಕಥೆ ಕೇಳಿದ ಸತೀಶ್ ತುಂಬಾ ಇಂಪ್ರೆಸ್ ಆಗಿದ್ದಾರೆ, ನೈಜತೆಗೆ ಹತ್ತಿರವಾದ ಕತೆ ಇದಾಗಿದೆ ಎಂದು ಹೇಳಿದ್ದಾರೆ. ಚಿತ್ರದ ಶೂಟಿಂಗ್ ಆರಂಭವಾದ ನಂತರ ಉಳಿದ ವಿವರಗಳನ್ನು ಬಹಿರಂಗಗೊಳಿಸಲಾಗುವುದು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಚಂದ್ರ ಮೋಹನ್ ನಿರ್ದೇಶನದ ಕಾಮಿಡಿ ಥ್ರಿಲ್ಲರ್‌‌ನಲ್ಲಿ ನಟ ಅನೀಶ್, ಗುರುನಂದನ್, ಚಿಕ್ಕಣ್ಣ ನಟನೆ‘ಅಶೋಕ ಬ್ಲೇಡ್‌ ಸಿನಿಮಾದ ಚಿತ್ರೀಕರಣ ಶೇ.80ರಷ್ಟು ಮುಗಿದಿದೆ. ಇದರ ಕಥೆ 70ರ ದಶಕದಲ್ಲಿ ಪ್ರಾರಂಭವಾಗಿ 2022ರವರೆಗೂ ಟ್ರಾವೆಲ್‌ ಮಾಡುತ್ತದೆ. ಹಾಗಾಗಿ 70ರ ದಶಕವನ್ನು ಮೊದಲ ಭಾಗದಲ್ಲಿ ಮತ್ತು 2022ರ ಕಥೆಯನ್ನು ಎರಡನೇ ಭಾಗದಲ್ಲಿ ಮಾಡಲು ನಿರ್ಧಾರ ಮಾಡಿದ್ದೇವೆ. ಕೆಲವು ಸಿನಿಮಾಗಳನ್ನು ನೋಡಿದರೆ ಪೂರ್ತಿ ಕಥೆಯನ್ನು ಇನ್ನೊಂದು ಭಾಗದಲ್ಲಿ ಮಾಡಬಹುದಿತ್ತು ಎನಿಸತ್ತದೆ. ಅಂತಹ ಒಂದು ಕಥೆ ಅಶೋಕ ಬ್ಲೇಡ್‌ ಸಿನಿಮಾದ್ದು. ಹಾಗಾಗಿ ಇದನ್ನು ಎರಡು ಭಾಗದಲ್ಲಿ ಮಾಡಲಾಗುತ್ತಿದೆ.ವಿನಯ್ ರಾಜಕುಮಾರ್ ನಟನೆಯ ಪೆಪೆ ಸಿನಿಮಾವನ್ನು ಶ್ರೀಲೇಶ್ ನಿರ್ದೇಶಿಸಿದ್ದಾರೆ. ಸದ್ ಈ ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ತಯಾರಕರು ಶೀಘ್ರದಲ್ಲೇ ಬಿಡುಗಡೆಯ ದಿನಾಂಕ ಘೋಷಿಸಲಿದ್ದಾರೆ.