ಮಾತುಕತೆಯಾಗಿರುವುದು ನಿಜ, ಆದರೆ ಅದು ಎಂಗೇಜ್‌ಮೆಂಟ್ ಅಲ್ಲ: ನಟಿ ವೈಷ್ಣವಿ ಗೌಡ ಸ್ಪಷ್ಟನೆ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ವೈಷ್ಣವಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ವೈಷ್ಣವಿ ಅವರೇ ಸ್ಪಷ್ಟನೆ ನೀಡಿದ್ದಾರೆ.ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿರುವ ವೈಷ್ಣವಿ ಅವರು, ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜ. ಆದರೆ, ಇದು ಎಂಗೇಜ್‌ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.ಮನೆಯವರು ನಿರ್ಧರಿಸಿರೋದರಿಂದ ಹುಡುಗ ಕೂಡ ನನಗೆ ಹೊಸ ವ್ಯಕ್ತಿ. ಹೀಗಾಗಿ ನನಗೂ ಆಲೋಚಿಸಲು ಕೊಂಚ ಸಮಯ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸದ್ದಿಲ್ಲದೆ ನಡೆಯಿತಾ ವೈಷ್ಣವಿ ಗೌಡ ನಿಶ್ಚಿತಾರ್ಥ? ಎಂಗೇಜ್ ಮೆಂಟ್ ಫೋಟೋ ವೈರಲ್: ಶುಭಾಶಯ ಕೋರಿದ ಚಿತ್ರರಂಗದ ಗಣ್ಯರು!ವೈಷ್ಣವಿ ಗೌಡ ಅವರ ಕುಟುಂಬ ಒಪ್ಪಿರುವ ಹುಡುಗನ ಹೆಸರು ವಿದ್ಯಾಭರಣ ಆಗಿದ್ದು, ಬೆಂಗಳೂರು ಮೂಲದ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ. ವಿದ್ಯಾಭರಣ ಅವರು, 2018ರಲ್ಲಿ `ವಿರಾಜ್’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆಂದು ತಿಳಿದುಬಂದಿದೆ.