ಮಂಡ್ಯ ಮೂಲದ ಉದಯೋನ್ಮುಖ ಹಿಂದಿ ಧಾರಾವಾಹಿ ನಟ ಪವನ್ ಹೃದಯಾಘಾತದಿಂದ ಸಾವು ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಮಂಡ್ಯ ಮೂಲದ ಪವನ್ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ, ಅವರಿಗೆ 25 ವರ್ಷ ವಯಸ್ಸಾಗಿತ್ತು. ಹಿಂದಿ ಹಾಗೂ ತಮಿಳು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆದ ಮಂಡ್ಯ ಮೂಲದ ಪವನ್ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ, ಅವರಿಗೆ 25 ವರ್ಷ ವಯಸ್ಸಾಗಿತ್ತು.ಪವನ್ ಮುಂಬೈನಲ್ಲಿಯೇ ನೆಲೆಸಿದ್ದರು. ಇವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿ‌ನ ಹರಿಹರಪುರ ಗ್ರಾಮದವರು. ಹಿಂದಿ, ತಮಿಳು ಕಿರುತೆರೆಯಲ್ಲಿ ಕಲಾವಿದರಾಗಿ ನಟಿಸುತ್ತಿದ್ದರು.ಇದನ್ನೂ ಓದಿ: ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶಸಿನಿಮಾಗಳಲ್ಲಿ ಅಭಿನಯಿಸಿ, ಬೆಳ್ಳಿತೆರೆಯಲ್ಲಿ ಮಿಂಚಬೇಕೆಂದು ಕನಸ್ಸು ಕಂಡಿದ್ದ ಪವನ್ ತಂದೆ ನಾಗರಾಜು ಹಾಗೂ ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು, ಗುರುವಾರ (ಆ.17) ನಸುಕಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಇಂದು ಹುಟ್ಟೂರಿನಲ್ಲಿ ಮೃತ ಯುವ ನಟನ ಅಂತ್ಯಸಂಸ್ಕಾರ ನಡೆಯಲಿದೆ. ಮಗನನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.