ಸೂರ್ಯ ವಸಿಷ್ಟ, ಶ್ರುತಿ ಹರಿಹರನ್ ಅಭಿನಯದ 'ಸಾರಾಂಶ' ಶೀಘ್ರದಲ್ಲೇ ತೆರೆಗೆ ತಮಸ್ಸು, ಲೂಸಿಯಾ, ಯು-ಟರ್ನ್, ಬದ್ಮಾಶ್, ಗಂಟುಮೂಟೆ, ಮತ್ತು ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸೂರ್ಯ ವಸಿಷ್ಟ ಅವರು ಸಾರಾಂಶ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿದ್ದಾರೆ. ತಮಸ್ಸು, ಲೂಸಿಯಾ, ಯು-ಟರ್ನ್, ಬದ್ಮಾಶ್, ಗಂಟುಮೂಟೆ, ಮತ್ತು ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸೂರ್ಯ ವಸಿಷ್ಟ ಅವರು ಸಾರಾಂಶ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿದ್ದಾರೆ.ಸಾರಂಶ ಚಿತ್ರವು ಫೆಬ್ರವರಿ 15 ರಂದು ತೆರೆಗೆ ಬರಲಿದೆ. ಬಿಡುಗಡೆಗೆ ಮುಂಚಿತವಾಗಿ, ನಿರ್ಮಾಪಕರು ಚಿತ್ರದ ಹಾಡನ್ನು ರಿಲೀಸ್ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಶಕ ಹೇಮಂತ್ ಎಂ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಟ್ರೇಲರ್ ಬಿಡುಗಡೆ ಮಾಡಿದರು. ಹಾಡಿನ ಗುಣಮಟ್ಟವನ್ನು ಮತ್ತಷ್ಟು ಶ್ಲಾಘಿಸಿದರು ಮತ್ತು ತಂಡಕ್ಕೆ ಶುಭ ಹಾರೈಸಿದರು.ಸಾರಾಂಶ ಒಂದು ಎಮೋಶನಲ್ ಸಿನಿಮಾವಾಗಿದೆ, ಟ್ರೇಲರ್ ಪ್ರತಿ ಪಾತ್ರದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ನಿರ್ದೇಶಕ ಸೂರ್ಯ ವಸಿಷ್ಠ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಾರಾಂಶ ಸಿನಿಮಾ ಈ ದಿನಮಾನಕ್ಕೆ ಅತ್ಯಂತ ಅಪರೂಪ ಎನಿಸುವ ಗುಣಹೊಂದಿರುವ ಚಿತ್ರ. ತೇಜಸ್ವಿ ಮತ್ತು ದೀಪಕ್ ಸುಬ್ರಮಣ್ಯ ವಿಶಿಷ್ಟ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಶ್ರುತಿ ಹರಿಹರನ್ ಮಾಯಾವಿ ಎಂಬ ಪಾತ್ರದಲ್ಲಿ ಎದುರಾಗಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್‌ ಟ್ರೇಲರ್‌ನಲ್ಲಿದೆ.ಇದನ್ನೂ ಓದಿ: 90ರ ದಶಕದ ಪ್ರಣಯದ ಕಥೆ ಹೇಳುವ ವಿಶಿಷ್ಟ ಸಿನಿಮಾ 'ವಿಷ್ಣುಪ್ರಿಯ'ಶ್ವೇತಾ ಗುಪ್ತಾ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹೊಂದಿರುವ ಪುಸ್ತಕ ಪ್ರಕಾಶಕರ ಪಾತ್ರದಲ್ಲಿ ನಟಿಸಿದ್ದಾರೆ. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಅಡಿಯಲ್ಲಿ ರವಿ ಕಶ್ಯಪ್ ಮತ್ತು ಆರ್ ಕೆ ನಲ್ಲಂ ಅವರು ಸಾರಾಂಶ ಸಿನಿಮಾ ನಿರ್ಮಿಸಿದ್ದಾರೆ.ಚಿತ್ರದಲ್ಲಿ ಸೂರ್ಯ ವಸಿಷ್ಟ ಜೊತೆಗೆ ಅಪರಾಜಿತ್ ಅವರ ಹಿನ್ನೆಲೆ ಸಂಗೀತವಿದೆ. ಉದಿತ್ ಹರಿತಾಸ್ ಸಂಗೀತ ನಿರ್ದೇಶನ ಹಾಗೂ ಪ್ರದೀಪ್ ನಾಯಕ್ ಸಂಕಲನವಿದೆ. ಚಿತ್ರದಲ್ಲಿ ಆಸಿಫ್ ಕ್ಷತ್ರಿಯ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್ ಮತ್ತು ಪೃಥ್ವಿ ಬನವಾಸಿ ಕೂಡ ಇದ್ದಾರೆ.