ಕಿರಣ್ ನಾರಾಯಣ್ ಅಭಿನಯದ 'ಸ್ನೇಹರ್ಷಿ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್! ರಂಗಭೂಮಿ ಕಲಾವಿದ ಕಿರಣ್ ನಾರಾಯಣ್ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಚೊಚ್ಚಲ ಸಿನಿಮಾ 'ಸ್ನೇಹರ್ಷಿ' ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ರಂಗಭೂಮಿ ಕಲಾವಿದ ಕಿರಣ್ ನಾರಾಯಣ್ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಚೊಚ್ಚಲ ಸಿನಿಮಾ 'ಸ್ನೇಹರ್ಷಿ' ಆಸ್ಟಿನ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮತ್ತು ರೇಡಿಯನ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ನವೆಂಬರ್ 24 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.ಬ್ಯಾಡ್ ಮ್ಯಾನರ್ಸ್, ಸ್ವಾತಿ ಮುತ್ತಿನ ಮಳೆ ಹನಿಯೇ ಮತ್ತು ಶುಗರ್ ಫ್ಯಾಕ್ಟರಿ ಚಿತ್ರಗಳ ಜೊತೆಯೇ ಸ್ನೇಹರ್ಷಿ ಕೂಡ ಬಿಡುಗಡೆಯಾಗಲಿದೆ. ನಿರ್ದೇಶನದ ಹೊರತಾಗಿ ನಾಯಕನಾಗಿಯೂ ನಟಿಸಿರುವ ಕಿರಣ್ ನಾರಾಯಣ್, ಅವರ ತಾಯಿ ನಾಗತಿಹಳ್ಳಿ ಪ್ರತಿಭಾ ಬರೆದಿರುವ ಕಥೆಯನ್ನು ಕುಟುಂಬ ಸ್ನೇಹಿ ಚಿತ್ರ ಎಂದು ಬಿಂಬಿಸಿದ್ದಾರೆ.'ಚಿತ್ರದಲ್ಲಿ ಗೆಳೆತನವೇ ಮುಖ್ಯವಾಗಿದ್ದರೂ, ಸಾಮಾಜಿಕ ಕಳಕಳಿ ಇದೆ. ಮಹಾನಗರಗಳಲ್ಲಿ ಪ್ರತಿ ದಿನ ಜನರು ಎದುರಿಸುವ ಸಮಸ್ಯೆ ಏನು? ಅವರ ಬದುಕು ಹೇಗೆ? ಎನ್ನುವುದರ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ. ಚಿತ್ರದಲ್ಲಿ ಆ್ಯಕ್ಷನ್, ಮ್ಯೂಸಿಕ್ ಮತ್ತು ಎಮೋಷನ್ಸ್‌ಗಳನ್ನು ಸೆರೆಹಿಡಿಯುವ ನಿರೂಪಣೆ ಚಿತ್ರದಲ್ಲಿದೆ' ಎಂದು ಕಿರಣ್ ಹೇಳುತ್ತಾರೆ.ಶ್ರೀ ಲಕ್ಷ್ಮೀ ಬೇಟರಾಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಸ್ನೇಹರ್ಷಿ ಸಿನಿಮಾವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಸಂಜನಾ ನಾಯಕಿಯಾಗಿ ನಟಿಸಿದ್ದು, ರಂಗನಾಥ್ ಸಂಪತ್, ಸುಧಾ ಬೆಳವಾಡಿ, ಪ್ರಕಾಶ್ ನವೀನ್ ಮತ್ತು ಚಕ್ರವರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಿಶೋರ್ ಅವರ ಛಾಯಾಗ್ರಹಣ ಮತ್ತು ಆಕಾಶ್ ಅಯಪ್ಪ ಅವರು ಸಂಗೀತ ಸಂಯೋಜಿಸಿದ್ದಾರೆ.