ಗಣೇಶ್- ಅಮೂಲ್ಯ ನಟನೆಯ 'ಶ್ರಾವಣಿ ಸುಬ್ರಮಣ್ಯ'ಗೆ 10 ವರ್ಷಗಳ ಸಂಭ್ರಮಾಚರಣೆ, ಬರಲಿದೆ ಸೀಕ್ವೆಲ್! ಮಂಜು ಸ್ವರಾಜ್ ನಿರ್ದೇಶನದ ಗಣೇಶ್ ಮತ್ತು ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಮಣ್ಯ 2013ರ ಡಿಸೆಂಬರ್ 27 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾಗಿ 10 ವರ್ಷ ಕಳೆದಿದ್ದು, ನೆನ್ನೆಯಷ್ಟೇ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಚಿತ್ರತಂಡ ಶ್ರಾವಣಿ ಸುಬ್ರಹ್ಮಣ್ಯ ಶೀರ್ಷಿಕೆಯ ಸೀಕ್ವೆಲ್ ಅನ್ನು ಘೋಷಿಸಿದೆ. ಮಂಜು ಸ್ವರಾಜ್ ನಿರ್ದೇಶನದ ಗಣೇಶ್ ಮತ್ತು ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಮಣ್ಯ 2013ರ ಡಿಸೆಂಬರ್ 27 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾಗಿ 10 ವರ್ಷ ಕಳೆದಿದ್ದು, ನೆನ್ನೆಯಷ್ಟೇ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಚಿತ್ರವನ್ನು ಪೂರ್ಣಗೊಳಿಸಲು ಸಹಕರಿಸಿದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ನಿರ್ದೇಶಕರು ಕೃತಜ್ಞತೆ ಹೇಳಿದ್ದಾರೆ.ಅನಂತ್ ನಾಗ್ ಮತ್ತು ಸಾಧು ಕೋಕಿಲಾ ಅವರನ್ನೊಳಗೊಂಡ ಈ ರೊಮ್ಯಾಂಟಿಕ್ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಚೆಲುವಿನ ಚಿತ್ತಾರ ಸಿನಿಮಾ ನಂತರ ಹಿಟ್ ಜೋಡಿಯಾದ ಗಣೇಶ್ ಮತ್ತು ಅಮೂಲ್ಯ ಅವರ ಕೆಮಿಸ್ಟ್ರಿಯನ್ನು ಜನರು ಇಷ್ಟಪಟ್ಟಿದ್ದರು. ಈ ವಿಶೇಷ ಸಂದರ್ಭವನ್ನು ಗುರುತಿಸಲು, ಚಿತ್ರತಂಡ ಶ್ರಾವಣಿ ಸುಬ್ರಮಣ್ಯ ಶೀರ್ಷಿಕೆಯ ಸೀಕ್ವೆಲ್ ಅನ್ನು ಘೋಷಿಸಿದೆ. ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಯೋಜನೆಯನ್ನು ನಿರ್ಮಿಸುತ್ತಿರುವ ನಿರ್ಮಾಪಕ ಕೆಎ ಸುರೇಶ್ ಅವರು ಈ ಘೋಷಣೆ ಮಾಡಿದ್ದಾರೆ. ಚಿತ್ರತಂಡ ಈಗ ಹೊಸ ಮುಖಗಳನ್ನು ಕರೆತರಲು ಎದುರು ನೋಡುತ್ತಿದೆ ಮತ್ತು ಚಿತ್ರದಲ್ಲಿನ ಪಾತ್ರಗಳಿಗಾಗಿ ಆಡಿಷನ್‌ಗೆ ಯುವ ಪ್ರತಿಭೆಗಳನ್ನು ಆಹ್ವಾನಿಸುತ್ತಿದೆ.