'ಲವ್ 360' ಸಿನಿಮಾ ತಮಿಳು, ತೆಲುಗಿನಲ್ಲಿ ರಿಮೇಕ್: ಶಶಾಂಕ್ ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ನಿರ್ದೇಶಕ ಶಶಾಂಕ್ ಅವರ ರೊಮ್ಯಾಂಟಿಕ್ ಡ್ರಾಮಾ, ಲವ್ 360 ಸಿನಿಮಾ ಈಗ ತಮಿಳು ಮತ್ತು ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ನಿರ್ದೇಶಕ ಶಶಾಂಕ್ ಅವರ ರೊಮ್ಯಾಂಟಿಕ್ ಡ್ರಾಮಾ, ಲವ್ 360 ಸಿನಿಮಾ ಈಗ ತಮಿಳು ಮತ್ತು ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ.ಹೊಸ ನಾಯಕ ನಟ ಪ್ರವೀಣ್ ಮತ್ತು ರಚನಾ ಇಂದರ್ ಅಭಿನಯದ ಚೊಚ್ಚಲ ಚಿತ್ರ ಇದಾಗಿದ್ದು, ಹಲವು ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಂಡಿದೆ. ಈ ಚಿತ್ರ ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಎಂದು ಶಶಾಂಕ್ ಅವರಿಂದ ತಿಳಿದು ಬಂದಿದೆ.ಚಿತ್ರದ ಯಶಸ್ಸಿಗೆ ಕನ್ನಡ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿರುವ ನಿರ್ದೇಶಕ ಶಶಾಂಕ್ ಅವರು, ಚಿತ್ರವನ್ನು ಎರಡು ಭಾಷೆಗಳಲ್ಲಿ ರೀಮೇಕ್ ಮಾಡಲು ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ ಎಂದು ತಿಳಿಸಿದ್ದಾರೆ.ಇದನ್ನು ಓದಿ: 'ಲವ್ 360' ಶೀರ್ಷಿಕೆಗೆ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಸ್ಫೂರ್ತಿ: ನಿರ್ದೇಶಕ ಶಶಾಂಕ್ಲವ್ 360 ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಬಂದಿದ್ದು, ಸಿದ್ ಶ್ರೀರಾಮ್ ಹಾಡಿರುವ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಯೋಜಿಸಿದ ‘ಜಗವೇ ನೀನು ಗೆಳತಿಯೇ..’ ಹಾಡು. ಯೂಟ್ಯೂಬ್ನಲ್ಲಿ ಈ ಹಾಡು 1.5 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದನ್ನು ಸಾಧ್ಯವಾಗಿಸಿದ ಕನ್ನಡ ಮಾಧ್ಯಮಗಳು ಮತ್ತು ಕನ್ನಡ ಪ್ರೇಕ್ಷಕರ ಪ್ರೀತಿಗೆ ನಾನು ಚಿರಋಣಿ #ಲವ್360#Love360EmotionalHit ../eLOEuQL1kn