ಭೈರತಿ ರಣಗಲ್ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ನಟ ರಾಹುಲ್ ಬೋಸ್ ವಾಪಸ್ ಬಹುಭಾಷಾ ನಟ ರಾಹುಲ್ ಬೋಸ್ ಅವರು ಭೈರತಿ ರಣಗಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅಪೂರ್ವ ಕಾಸರವಳ್ಳಿ ನಿರ್ದೇಶನದ ನಿರುತ್ತರ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಂತರ, ಈಗ ನರ್ತನ್ ಅವರ ನಿರ್ದೇಶನದಲ್ಲಿನ ಭೈರತಿ ರಣಗಲ್ ಸಿನಿಮಾದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಬಹುಭಾಷಾ ನಟ ರಾಹುಲ್ ಬೋಸ್ ಅವರು ಭೈರತಿ ರಣಗಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅಪೂರ್ವ ಕಾಸರವಳ್ಳಿ ನಿರ್ದೇಶನದ ನಿರುತ್ತರ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಂತರ, ಈಗ ನರ್ತನ್ ಅವರ ನಿರ್ದೇಶನದಲ್ಲಿನ ಭೈರತಿ ರಣಗಲ್ ಸಿನಿಮಾದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪಾತ್ರದ ಕುರಿತು ಹೆಚ್ಚಿನ ವಿವರಗಳನ್ನು ಅನಾವರಣಗೊಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.2017ರಲ್ಲಿ ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ನಿರ್ವಹಿಸಿದ್ದ `ಭೈರತಿ ರಣಗಲ್’ ಪಾತ್ರ ಸೂಪರ್ ಹಿಟ್ ಆಗಿತ್ತು. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ `ಭೈರತಿ ರಣಗಲ್’ ಅನ್ನು ಸಿನಿಮಾದ ಶೀರ್ಷಿಕೆಯನ್ನಾಗಿ ಮಾಡಲಾಗಿದೆ. ಭೈರತಿ ರಣಗಲ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿದ್ದು, ಚಿತ್ರವನ್ನು ನರ್ತನ್ ನಿರ್ದೇಶನ ಮಾಡಲಿದ್ದಾರೆ.ಇದನ್ನೂ ಓದಿ: ಭೈರತಿ ರಣಗಲ್ ಪಾತ್ರವು ನನ್ನ ಹೃದಯಕ್ಕೆ ಹತ್ತಿರವಾಗಿದೆ: ನಟ ಶಿವರಾಜಕುಮಾರ್ಮಫ್ತಿಯಲ್ಲಿನ ಪಾತ್ರಗಳನ್ನು ಪುನರಾವರ್ತಿಸಲು ದೇವರಾಜ್, ಮಧು ಗುರುಸ್ವಾಮಿ, ವಸಿಷ್ಠ ಸಿಂಹ ಮತ್ತು ಬಾಬು ಹಿರಣ್ಣಯ್ಯ ಅವರನ್ನು ಸಹ ಚಿತ್ರ ಒಳಗೊಂಡಿದೆ. ಈ ಹಿಂದೆ ಮಫ್ತಿಯಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ಛಾಯಾಗ್ರಾಹಕ ನವೀನ್ ಕುಮಾರ್ ಅವರು ನರ್ತನ್ ಅವರ ಎರಡನೇ ಚಿತ್ರಕ್ಕೆ ಕೈಜೋಡಿಸಲಿದ್ದಾರೆ.