ಸ್ಟಾರ್ ನಟ ಸೇರಿ ಚಿತ್ರತಂಡ ಅವಧಿ ಮೀರಿ ಪಬ್ ನಲ್ಲಿ ಪಾರ್ಟಿ?: ಕೊನೆಗೂ ಪೊಲೀಸರಿಂದ ಎಫ್ಐಆರ್ ದಾಖಲು! ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್ () ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ಅವಧಿ ಮೀರಿ ಬೆಳಗಿನ ಜಾವದವರೆಗೆ ಸ್ಟಾರ್ ನಟ ಮತ್ತು ಅವರ ಸ್ನೇಹಿತರ ಬಳಗ, ಚಿತ್ರತಂಡ ಬೆಂಗಳೂರಿನ ಪಬ್ ವೊಂದರಲ್ಲಿ ಪಾರ್ಟಿ ಮಾಡಿರುವ ಪ್ರಕರಣದಲ್ಲಿ ಪಬ್ () ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.ನಡೆದ ಘಟನೆಯೇನು: ಇತ್ತೀಚೆಗೆ ಸ್ಟಾರ್ ನಟನ ಸಿನಿಮಾ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಅದರ ಖುಷಿಗಾಗಿ ಸಕ್ಸಸ್ ಸೆಲೆಬ್ರೇಷನ್ ಬಳಿಕ ಬೆಂಗಳೂರಿನ ರಾಜಾಜಿನಗರದ ಒರಾಯನ್‌ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಸ್ಟಾರ್ಸ್ ಪಾರ್ಟಿಗೆ ಎಲ್ಲರೂ ಸೇರಿದರು. ಪಾರ್ಟಿಯಲ್ಲಿ ಚಿತ್ರದ ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಇದು ನಡೆದಿದ್ದು ಮೊನ್ನೆ ಜನವರಿ‌ 3ರಂದು‌ ರಾತ್ರಿ‌ ಪಬ್ಗೆ ಸಿನಿಮಾ ತಂಡ ಆಗಮಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ದರ್ಶನ್ ಅಭಿನಯದ 'ಕಾಟೇರ': 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ನಿಯಮವೇನು?: ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನ್ವಯವಾಗುವ ನಿಯಮ ಪ್ರಕಾರ ಮಧ್ಯರಾತ್ರಿ 1 ಗಂಟೆಗೆ ಪಬ್ ಮುಚ್ಚಬೇಕು. ಒಂದು ಗಂಟೆ ಆಗುತ್ತಿದ್ದಂತೆ ಪಾರ್ಟಿ ಪೂರ್ಣಗೊಳಿಸಬೇಕಿತ್ತು. ಆದರೆ, ಮುಂಜಾನೆವರೆಗೂ ಪಾರ್ಟಿ ನಡೆದಿದೆ. ಮದ್ಯರಾತ್ರಿ ಬೀಟ್ನಲ್ಲಿದ್ದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಇದ್ದರೂ ಕಂಡೂ ಕಾಣದಂತೆ ಸುಮ್ಮನಾಗಿದ್ದರು ಎಂದು ಹೇಳಲಾಗುತ್ತಿದೆ. ಪಾರ್ಟಿ ಮುಗಿಸಿಕೊಂಡು ಹೊರಬರುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ವೈರಲ್ ಆಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ತೀವ್ರ ತರಾಟೆಗೆ ತೆಗೆದುಕೊಂಡ ಮೇಲೆ ಸುಬ್ರಹ್ಮಣ್ಯನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಇದನ್ನೂ ಓದಿ: ವಿದೇಶದಲ್ಲಿಯೂ 'ಕಾಟೇರ' ಹವಾ! ಒಮನ್ ನಲ್ಲಿ ಹೌಸ್ ಫುಲ್ ಪ್ರದರ್ಶನಜೆಟ್ ಲ್ಯಾಗ್ ಮ್ಯಾನೇಜರ್ ಪ್ರಶಾಂತ್, ಮಾಲೀಕರಾದ ಶಶಿರೇಖಾ ಜಗದೀಶ್ ಮೇಲೆ ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು‌ ಉಲ್ಲಂಘನೆ ಆರೋಪದಡಿ ಎಫ್ಐಆರ್ ಹಾಕಲಾಗಿದೆ. ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಗೆ ಸೇರಿದ ಪಬ್ ಎಂದು ತಿಳಿದುಬಂದಿದೆ.