'ಗೀತಾ ಗೋವಿಂದಂ' ನಿರ್ದೇಶಕ ಪರಶುರಾಮ್ ಜೊತೆ ಹೊಸ ಸಿನಿಮಾ; ಮತ್ತೆ ಜೊತೆಯಾಗಿ ನಟಿಸಲಿದ್ದಾರಾ ರಶ್ಮಿಕಾ-ವಿಜಯ್‌ ದೇವರಕೊಂಡ? ಬಾಕ್ಸ್‌ ಆಫೀಸ್‌ನಲ್ಲಿ ಕಳಪೆ ಸಾಧನೆ ತೋರಿದ್ದ ಹೆಚ್ಚಿನ ಬಜೆಟ್ ಸಿನಿಮಾ ಲೈಗರ್ ಬಳಿಕ ನಟ ವಿಜಯ್ ದೇವರಕೊಂಡ ಮತ್ತೆ ಉತ್ತಮ ಚಿತ್ರದೊಂದಿಗೆ ಮರಳಲು ಸಜ್ಜಾಗಿದ್ದಾರೆ. ಅವರು ಈ ಹಿಂದೆ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ 'ಗೀತಾ ಗೋವಿಂದಂ' ನಿರ್ದೇಶಕ ಪರಶುರಾಮ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೈದರಾಬಾದ್: ಬಾಕ್ಸ್‌ ಆಫೀಸ್‌ನಲ್ಲಿ ಕಳಪೆ ಸಾಧನೆ ತೋರಿದ್ದ ಹೆಚ್ಚಿನ ಬಜೆಟ್ ಸಿನಿಮಾ ಲೈಗರ್ ಬಳಿಕ ನಟ ವಿಜಯ್ ದೇವರಕೊಂಡ ಮತ್ತೆ ಉತ್ತಮ ಚಿತ್ರದೊಂದಿಗೆ ಮರಳಲು ಸಜ್ಜಾಗಿದ್ದಾರೆ. ಅವರು ಈ ಹಿಂದೆ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ 'ಗೀತಾ ಗೋವಿಂದಂ' ನಿರ್ದೇಶಕ ಪರಶುರಾಮ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಅಲ್ಲು ಅರವಿಂದ್‌ ಅವರ ಗೀತಾ ಆರ್ಟ್ಸ್‌ 'ಗೀತ ಗೋವಿಂದಂ' ಚಿತ್ರವನ್ನು ನಿರ್ಮಿಸಿದ್ದು, ಪರಶುರಾಮ್‌ ಅವರ ಕಥೆ ಮತ್ತು ನಿರ್ದೇಶನ ಚಿತ್ರಕ್ಕಿತ್ತು. ಈ ಚಿತ್ರ 2018ರ ಆಗಸ್ಟ್ 15 ರಂದು ತೆರೆ ಕಂಡಿತ್ತು. ಸಿನಿಪ್ರಿಯರು ರಶ್ಮಿಕಾ ಮತ್ತು ವಿಜಯ್ ಮೋಡಿಗೆ ಮರುಳಾಗಿದ್ದರು ಮತ್ತು 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ಈ ಸಿನಿಮಾ 132 ಕೋಟಿ ರೂಪಾಯಿ ಗಳಿಸಿತ್ತು.'ನಾವು ಮತ್ತೆ ಒಟ್ಟಿಗೆ ಸೇರುತ್ತಿದ್ದೇವೆ' ಎಂದು ವಿಜಯ್ ದೇವರಕೊಂಡ ಅವರು 'ಗೀತಾ ಗೋವಿಂದಂ' ನಿರ್ದೇಶಕರೊಂದಿಗಿನ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಗೀತಾ ಗೋವಿಂದಂ ಚಿತ್ರವು ವಿಜಯ್ ಅವರ ಅತಿದೊಡ್ಡ ಹಿಟ್‌ ಸಿನಿಮಾಗಳಲ್ಲಿ ಒಂದಾಗಿದೆ. .@ @SVC_official ://./pxT6NqHWXcಏಸ್ ನಿರ್ಮಾಪಕ 'ದಿಲ್' ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್, 'ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಅವರ ಬ್ಲಾಕ್‌ಬಸ್ಟರ್ ಸಂಯೋಜನೆಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಘೋಷಿಸಲು ತುಂಬಾ ಸಂತೋಷವಾಗಿದೆ' ಎಂದು ಟ್ವೀಟ್ ಮಾಡಿದೆ. # @ & @ . ... ../WQfyhPFXS5ಪುರಿ ಜಗನ್ನಾಥ್ ನಿರ್ದೇಶನದ ಪ್ಯಾನ್-ಇಂಡಿಯಾ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಚಿತ್ರದ ಸೋಲು ನಟನಿಗೆ ದೊಡ್ಡ ಹೊಡೆತ ನೀಡಿತ್ತು.ಇದನ್ನೂ ಓದಿ: ಕೆಟ್ಟ ಮೇಲೆ ಬುದ್ದಿ ಬಂತಾ? ಸಂದರ್ಶನದಲ್ಲಿ ರಕ್ಷಿತ್-ರಿಷಬ್ ಬಗ್ಗೆ ರಶ್ಮಿಕಾ ಮಾತು; 'ಶೆಟ್ರು' ಫ್ಯಾನ್ಸ್ ಗೆ ಅಚ್ಚರಿ ಜೊತೆ ಶಾಕ್!ಪರಶುರಾಮ್ ಅವರೊಂದಿಗಿನ ಅವರ ಮುಂದಿನ ಚಲನಚಿತ್ರದ ಘೋಷಣೆಯು ವಿಜಯ್ ಅವರು ತಮ್ಮ ವೃತ್ತಿಜೀವನದ ಹಾದಿಯನ್ನು ಕಥೆ-ಆಧಾರಿತ ಚಲನಚಿತ್ರಗಳೊಂದಿಗೆ ಮರು ವ್ಯಾಖ್ಯಾನಿಸಲು ಮತ್ತೆ ಸರಿ ಹಾದಿಗೆ ಹಿಂತಿರುಗುತ್ತಿದ್ದಾರೆ ಎಂದು ಸೂಚಿಸುತ್ತದೆ.