'ಕೆಲವೇ ದಿನಗಳಲ್ಲಿ ನಿಮ್ಮೊಂದಿಗೆ ಖುಷಿ ವಿಷಯ ಹಂಚಿಕೊಳ್ತೀನಿ': ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಕಿರಿಕ್ ಕೀರ್ತಿ ಪತ್ರಕರ್ತ, ನಿರೂಪಕ, ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಪತ್ನಿ ಅರ್ಪಿತಾಗೆ ವಿಚ್ಛೇದನ ನೀಡಿರುವುದಾಗಿ ನೆನ್ನೆಯಷ್ಟೇ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಇನ್ನು ಕೆಲವೇ ದಿನಗಳಲ್ಲಿ ಖುಷಿಯ ವಿಚಾರವೊಂದನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಬೆಂಗಳೂರು: ಪತ್ರಕರ್ತ, ನಿರೂಪಕ, ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಪತ್ನಿ ಅರ್ಪಿತಾಗೆ ವಿಚ್ಛೇದನ ನೀಡಿರುವುದಾಗಿ ನೆನ್ನೆಯಷ್ಟೇ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಇನ್ನು ಕೆಲವೇ ದಿನಗಳಲ್ಲಿ ಖುಷಿಯ ವಿಚಾರವೊಂದನ್ನು ಹಂಚಿಕೊಳ್ಳುವುದಾಗಿ ಹೇಳಿದ್ದು, ನಿರೀಕ್ಷೆ ಹುಟ್ಟುಹಾಕಿದ್ದಾರೆ.ಈ ಕುರಿತು ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಕೀರ್ತಿ ಫೋನ್ ರೀಚ್ ಆಗ್ತಿಲ್ಲ... ಮೆಸೇಜಿಗೆ ರಿಪ್ಲೆ ಮಾಡ್ತಿಲ್ಲ.... ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಇಲ್ಲ... ಇದು ಕಳೆದ ಆರೇಳು ತಿಂಗಳಿಂದ ಸಾಕಷ್ಟು ಜನರ ಮಾತು... ಹೌದು ನಾನು ಸಿಕ್ಕಿಲ್ಲ, ಮಾತಾಡಿಲ್ಲ... ನನಗೆ ಕೆಲವು ದಿನ‌ ಎಲ್ಲದರಿಂದ ದೂರ ಇರಬೇಕು ಅನಿಸಿತ್ತು... ನಾನು‌ ನನ್ನೊಡನೆ ಇದ್ದೆ ಎಂದಿದ್ದಾರೆ. ಕಾಳಜಿಯಿಂದ ಕೆಲವರು ಹೇಗೊ ಕನೆಕ್ಟ್ ಆಗಿ ನನಗೆ ಸಮಾಧಾನ ಮಾಡಿದವರೂ ಇದ್ದಾರೆ. ನನ್ನನ್ನು ನಂಬಿ ನನ್ನ ಮೇಲೆ ಹೂಡಿಕೆ ಮಾಡಿದವರಿಗೆ ಏನಾಗುತ್ತೋ ಎನ್ನುವ ಆತಂಕವಿತ್ತು. ಆದರೆ, ಅದಕ್ಕೆಲ್ಲ ಈಗ ಪೂರ್ಣ ವಿರಾಮ. ಇನ್ನು ನಾನು ನಿಮ್ಮೊಡನೆ ಇರ್ತೀನಿ ಎಂದು ಭರವಸೆ ನೀಡಿದ್ದಾರೆ. ಕಿರಿಕ್ ಕೀರ್ತಿ - (@)ಹೌದು ಕೆಲ ತಿಂಗಳು ನಾನು ಸಂಕಷ್ಟದಲ್ಲಿದ್ದೆ. ವೈಯಕ್ತಿಕ ಕಾರಣಗಳು ನನ್ನ ಕೈಕಟ್ಟಿ ಹಾಕಿತ್ತು. ಯಾವುದರಲ್ಲೂ ಆಸಕ್ತಿ ಇಲ್ಲದ ಮನಸ್ಥಿತಿ ನಿರ್ಮಾಣ ಆಗಿತ್ತು. ಈಗ ನಾನು ಎಲ್ಲದರಿಂದ ಹೊರಬಂದು ಮತ್ತೆ ಆ್ಯಕ್ಟಿವ್ ಆಗಬೇಕೆಂದು ನಿರ್ಧಾರ ಮಾಡಿದ್ದೀನಿ. ಇನ್ಮುಂದೆ ನಿಮಗೆ ನಾನು ಹೊಸ ರೂಪದಲ್ಲೇ ಕಾಣ ಸಿಗ್ತೀನಿ. ನಿಮ್ಮೆಲ್ಲರ ಆತಂಕಕ್ಕೆ ಫುಲ್ ಸ್ಟಾಪ್ ಇಡ್ತೀನಿ. ನಂಬಿದವರ ನಂಬಿಕೆ‌ ಉಳಿಸಿಕೊಳ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ: ಪತ್ನಿಗೆ ವಿಚ್ಛೇದನ ನೀಡಿದ ಬಗ್ಗೆ ಕಿರಿಕ್ ಕೀರ್ತಿ ಅಧಿಕೃತ ಮಾಹಿತಿ!ನನಗಾಗಿ ಬೇಸರಿಸಿಕೊಂಡವರಿಗೂ, ನನ್ನಿಂದ ಬೇಸರಗೊಂಡವರಿಗೂ ಖುಷಿ ಹಂಚುತ್ತೀನಿ. ಕೆಲವೇ ದಿನಗಳಲ್ಲಿ ನಿಮ್ಮೊಂದಿಗೆ ಖುಷಿ ವಿಷಯ ಹಂಚಿಕೊಳ್ತೀನಿ. ನನ್ನನ್ನು ಮನೆ ಮಗನ‌ ಹಾಗೆ, ಸಹೋದರನ ಹಾಗೆ ಸಮಾಧಾನ ಮಾಡಿದ ನಿಮ್ಮ‌ ಪ್ರೀತಿಗೆ ನಾನು ಋಣಿ. ಮತ್ತೆ ನನ್ನ ದಿನಗಳು ಮರಳಿ ಬರಲಿ ಎಂದು ನಿಮ್ಮದೊಂದು ಹಾರೈಕೆ ಇರಲಿ... ... ನೀವು ಜೊತೇಲಿರಿ ಅಷ್ಟು ಸಾಕು... ಧನ್ಯವಾದ.. ಎಂದು ಕಿರಿಕ್ ಕೀರ್ತಿ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.